ಫೆ.26ರಂದು ಕೊಡಂಗಾಯಿ ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆ: ಸ್ವಾಗತ ಸಮಿತಿ ರಚನೆ
ವಿಟ್ಲ, ಫೆ.5: ಇಲ್ಲಿಗೆ ಸಮೀಪದ ಕೊಡಂಗಾಯಿಯ ನವೀಕೃತ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮವು ಫೆ.26ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್, ಖಾಝಿಗಳಾದ ತ್ವಾಖಾ ಉಸ್ತಾದ್, ಮಾಣಿ ಉಸ್ತಾದ್, ಬಂಬ್ರಾಣ ಉಸ್ತಾದ್, ವಾಲೆಮುಂಡೋವು ಉಸ್ತಾದ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಬಿ.ಎಂ.ಫಾರೂಕ್ ಮೊದಲಾದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಿದ್ಧತೆಗಾಗಿ ಈಗಾಗಲೇ ಸ್ವಾಗತ ಸಮಿತಿ ರಚನೆ ಸಭೆ ನಡೆಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಎಂ.ಎ. ಕೊಡಂಗಾಯಿ ಫಾಝಿಲ್ ಹನೀಫಿ, ಉಪಾಧ್ಯಕ್ಷರಾಗಿ ರಫೀಕ್ ಪಳ್ಳ ಕೊಡಂಗಾಯಿ ಮತ್ತು ನೂರುದ್ದೀನ್ ಕೊಡಂಗಾಯಿ, ಕನ್ವೀನರ್ ಆಗಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಉಪ ಕನ್ವೀನರ್ ಆಗಿ ಅಶ್ರಫ್ ಸಅದಿ ಕರ್ಕಳ ಮತ್ತು ಟಿ.ಎಂ.ಮಜೀದ್ ಕೊಡಂಗಾಯಿ, ಕೋಶಾಧಿಕಾರಿಯಾಗಿ ಹಕೀಂ ಮಾಡಾವು ಹಾಗೂ 101 ಮಂದಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಕೆ.ಕೆ.ಇಸ್ಮಾಯೀಲ್ ಮುಸ್ಲಿಯಾರ್ ದುಆಗೈದರು. ಕೆ.ಬಿ.ದಾರಿಮಿ ಪ್ರಸ್ತಾವನೆಗೈದರು. ಜಮಾಅತ್ ಸಮಿತಿ ಅಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಸಿ.ಎಚ್.ಅಬ್ದುಲ್ ಖಾದರ್ ಹಾಗೂ ಜಮಾಅತ್ ಮತ್ತು ಅಧೀನ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.