ನಂಜನಗೂಡು | ಠಾಣೆ ಎದುರೇ ಪೊಲೀಸ್ ಜೀಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಮೈಸೂರು: ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಮುಂಭಾಗವೇ ಪೊಲೀಸ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ವರದಿಯಾಗಿದೆ.
ನಂಜನಗೂಡು ತಾಲೂಕು ಸಿಂದುವಳ್ಳಿ ಗ್ರಾಮದ ಅಭಿ(25) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಈತ ನಂಜನಗೂಡಿನಿಂದ ಗುಂಡ್ಲುಪೇಟೆ- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಧುವಳ್ಳಿ ಗ್ರಾಮಕ್ಕೆ ತನ್ನ ಬೈಕ್ ನಲ್ಲಿ ತೆರಳುವ ವೇಳೆ ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಒಳಗಿನಿಂದ ಬಂದ ಪೊಲೀಸ್ ಜೀಪ್ ಢಿಕ್ಕಿ ಹೊಡೆದಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಈ ಸ್ಥಳದಲ್ಲಿ ಕೆ.ಎಚ್.ಬಿ ಕಾಲೋನಿಗೆ ತಿರುಗುವ ಮಾರ್ಗ ಇದ್ದು, ಸಾಕಷ್ಟು ಅವಘಡಗಳು ಉಂಟಾಗಿವೆ. ಈ ಜಾಗದಲ್ಲಿ ಬ್ಯಾರಿಕೇಡ್ ಅಥವಾ ಇನ್ನಿತರೆ ಕ್ರಮಗಳನ್ನು ಪೊಲೀಸರು ಕೈಗೊಳ್ಳದಿರುವುದೆ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story