ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಕುಟುಂಬ ಸಮ್ಮಿಲನ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ ದುಬೈ ಸಫಾ ಪಾರ್ಕ್ ನಲ್ಲಿ ಸಂಘಟಿಸಿದ ಕುಟಂಬ ಸಮ್ಮಿಲನ ಮತ್ತು ವಿಹಾರ ಕೂಟದಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ನೂಹ್ ಅಬ್ದುಲ್ ರಶೀದ್ ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾಂಭವಾಯಿತು. ಕೂಟವನ್ನು ಅಬ್ದುಲ್ಲಾ ಮದುಮೂಲೆ ನೇತೃತ್ವದ ಪಿಕ್ನಿಕ್ ಸಂಘಟನಾ ಸಮಿತಿಯ ಮೊಹಮ್ಮದ್ ಕಲ್ಲಾಪು, ಅಬ್ದುಲ್ ರವೂಫ್, ಇಮ್ರಾನ್ ಅಹ್ಮದ್, ನವಾಝ್ ಉಚ್ಚಿಲ್ , ಅಬ್ದುಲ್ ಜಲೀಲ್ ಬಜ್ಪೆ ಮತ್ತು ಮುಜೀಬ್ ಉಚ್ಚಿಲ್ ನಡೆಸಿಕೊಟ್ಟರು.
ಮೊಹಮ್ಮದ್ ಅಲಿ ಉಚ್ಚಿಲ್ ಎಲ್ಲರನ್ನೂ ಸ್ವಾಗತಿಸಿದರು.
ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಪುರುಷರ, ಮಹಿಳೆಯರ ಮತ್ತು ಮಕ್ಕಳ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅಬ್ದುಲ್ ಜಲೀಲ್ ಬಜ್ಪೆ ವಂದಿಸಿದರು.
ಬಿಡಬ್ಲ್ಯೂಎಫ್ ನ ಪದಾಧಿಕಾರಿಗಳಾದ ಹಂಝ ಕಣ್ಣಗಾರ್, ಹಮೀದ್ ಗುರುಪುರ್, ಹನೀಫ್ ಉಳ್ಳಾಲ್, ರಶೀದ್ ವಿಟ್ಲ, ಅಬ್ದುಲ್ ಮಜೀದ್ ಕುತ್ತಾರ್, ಮಜೀದ್ ಆತೂರ್, ಇರ್ಫಾನ್ ಕುದ್ರೋಳಿ, ಮೊಯಿನುದ್ದೀನ್ ಹಂಡೇಲ್, ರಶೀದ್ ಬಿಜೈ, ಬಷೀರ್ ಬಜ್ಪೆ, ಬಷೀರ್ ಉಚ್ಚಿಲ್, ಯಾಹ್ಯಾ ಕೊಡ್ಲಿಪೇಟೆ, ನಿಝಾಂ ವಿಟ್ಲ, ಇಮ್ರಾನ್ ಕೃಷ್ಣಾಪುರ, ಸಿರಾಜ್ ಪಾರಳಾಡಕ್ಕ ಮತ್ತು ನಝೀರ್ ಉಬರ್ ಉಪಸ್ಥಿತರಿದ್ದರು.