ರಾಷ್ಟ್ರೀಯ
ಟರ್ಕಿಯ ಭೂಕಂಪ ಪೀಡಿತ ಪ್ರದೇಶದಲ್ಲಿ 10 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ: ಎಂಇಎ
ವಾರ್ತಾ ಭಾರತಿ : 8 Feb, 2023

PHOTO: TWITTER
ಹೊಸದಿಲ್ಲಿ, ಫೆ. 8: ಭೂಕಂಪ ಪೀಡಿತ ಟರ್ಕಿಯ ದುರ್ಗಮ ಪ್ರದೇಶಗಳಲ್ಲಿ 10 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ. ಉಳಿದವರು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬುಧವಾರ ತಿಳಿಸಿದೆ.
ಟರ್ಕಿಯ ಭೂಕಂಪ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಪಶ್ಚಿಮ)ದ ಕಾರ್ಯದರ್ಶಿ ಸಂಜಯ್ ವರ್ಮಾ ಅವರು ಹೇಳಿದ್ದಾರೆ. ಟರ್ಕಿಯಲ್ಲಿ ನಾಪತ್ತೆಯಾದ ಭಾರತೀಯರ ಕುಟುಂಬದ ಸದಸ್ಯರೊಂದಿಗೆ ಸರಕಾರ ಸಂಪರ್ಕದಲ್ಲಿದೆ. ಭಾರತ ಈಗಾಗಲೇ ಟರ್ಕಿಗೆ 4 ಸೇನಾ ಸಾಗಾಟ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ಅವರು ತಿಳಿಸಿದ್ದಾರೆ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)