varthabharthi


ದಕ್ಷಿಣ ಕನ್ನಡ

ಸುರತ್ಕಲ್ ‌ಫಾಝಿಲ್ ಕೊಲೆ ಆರೋಪಿಯಿಂದ ಹಣಕ್ಕಾಗಿ ಬೆದರಿಕೆ: ಉಳ್ಳಾಲ ಠಾಣೆಯಲ್ಲಿ ‌ಪ್ರಕರಣ ದಾಖಲು

ವಾರ್ತಾ ಭಾರತಿ : 8 Feb, 2023

ಆರೋಪಿ ಹರ್ಷಿತ್ 

ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ  ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದ್ದು, ಈ ಬಗ್ಗೆ ಉದಯಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಹರ್ಷಿತ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷಿತ್ ಎಂಬಾತ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಎಂಬವರಿಗೆ ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ ಆಗಿದ್ದು, ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ. ನನಗೆ ಧನ ಸಹಾಯ ನೀಡಬೇಕು ಎಂದು ವಿನಂತಿಸಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ಕುಮಾರ್ ನಿರಾಕರಿಸಿದರು ಎಂದು ತಿಳಿದು ಬಂದಿದೆ.

ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ರವರು ಒಪ್ಪದ ಕಾರಣ ಹರ್ಷಿತ್ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸುರತ್ಕಲ್: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಫಾಝಿಲ್ ಸಹೋದರನಿಗೆ ಹಲ್ಲೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)