varthabharthi


ಅಂತಾರಾಷ್ಟ್ರೀಯ

ಅಫ್ಘಾನ್: ಮಸೀದಿ ಬಳಿ ಸ್ಫೋಟ 3 ಮಂದಿಗೆ ಗಾಯ

ವಾರ್ತಾ ಭಾರತಿ : 8 Feb, 2023

ಕಾಬೂಲ್, ಫೆ.8: ಅಫ್ಘಾನಿಸ್ತಾನ(Afghanistan)ದ ಫರ್ಯಾಬ್ ಪ್ರಾಂತದ ಬಳಿಯ ಇಮಾಮ್ ಅಬು ಹನೀಫಾ ಮಸೀದಿ(Imam Abu Hanifa Mosque)ಯ ಬಳಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 3 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫಯಾಬ್ ಪ್ರಾಂತದ ರಾಜಧಾನಿ ಮೈಮಾನ ನಗರದ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ತೆರಳುತ್ತಿದ್ದ ಸಂದರ್ಭ ಮಸೀದಿಯ  ಬಳಿ ಪಾರ್ಕ್ ಮಾಡಲಾಗಿದ್ದ ಮೋಟರ್‍ಬೈಕ್‍ನಲ್ಲಿ ಇರಿಸಿದ್ದ ಸ್ಫೋಟಕವನ್ನು ದೂರನಿಯಂತ್ರಣ ಸಾಧನ ಬಳಸಿ ಸ್ಫೋಟಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)