varthabharthi


ಕರ್ನಾಟಕ

ಪ್ರಜಾಧ್ವನಿ ಯಾತ್ರೆ ವೇಳೆ ಅಂಬೇಡ್ಕರ್​ ಪುತ್ಥಳಿಗೆ ಬಸ್​ನಿಂದಲೇ ಹಾರ ಎಸೆದ ಡಿಕೆಶಿ: ಬಿಜೆಪಿ ಖಂಡನೆ

ವಾರ್ತಾ ಭಾರತಿ : 8 Feb, 2023

ಬೆಂಗಳೂರು: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ಅಂಬೇಡ್ಕರ್​ ಪುತ್ಥಳಿಗೆ ಬಸ್​ನಿಂದಲೇ ಹಾರ ಎಸೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ. 

2 ದಿನದ ಹಿಂದೆ ಚಿತ್ರದುರ್ಗದಲ್ಲಿ  ನಡೆದ ಪ್ರಜಾಧ್ವನಿ ಯಾತ್ರೆಯದ್ದು ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ''ಬಾಬಾಸಾಹೇಬರನ್ನು ರಾಜಕೀಯವಾಗಿ ಮುಗಿಸಬೇಕೆಂದು ಅವರ ವಿರುದ್ಧ ಅಭ್ಯರ್ಥಿ ಹಾಕಿದ ಕಾಂಗ್ರೆಸ್  ಪಕ್ಷದವರು ಇನ್ನೇನು ಮಾಡಿಯಾರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರ ಈ ವರ್ತನೆ ನಾಚಿಕೆಗೇಡು, ಖಂಡನೀಯ'' ಎಂದು ಹೇಳಿದೆ.

''ದಲಿತರನ್ನು ಅಪಮಾನ ಮಾಡುವುದು ಕಾಂಗ್ರೆಸ್ ನ ಹುಟ್ಟುಗುಣ ಈ ದಲಿತವಿರೋಧಿ ಮಾನಸಿಕತೆಗೆ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಲಿದೆ'' ಎಂದು ಬಿಜೆಪಿ ಟ್ವಿಟರ್ ನಲ್ಲಿ ಬರೆದುಕೊಂಡಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)