ಚೀನಾದಿಂದ 700 ದಶಲಕ್ಷ ಡಾಲರ್ ಸಾಲ ಮಂಜೂರು: ಪಾಕಿಸ್ತಾನ
ಇಸ್ಲಮಾಬಾದ್, ಫೆ.22: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ 700 ದಶಲಕ್ಷ ಡಾಲರ್ ಮೊತ್ತದ ಸಾಲವನ್ನು ಮಿತ್ರರಾಷ್ಟ್ರ ಚೀನಾ ಮಂಜೂರುಗೊಳಿಸಿದ್ದು ಈ ವಾರ ಸೆಂಟ್ರಲ್ಬ್ಯಾಂಕ್ಗೆ ವರ್ಗಾವಣೆಯಾಗಲಿದೆ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದಾರ್ ಬುಧವಾರ ಘೋಷಿಸಿದ್ದಾರೆ.
ಸಾಲ ಪಡೆಯುವ ನಿಟ್ಟಿನಲ್ಲಿ ಬೋರ್ಡ್ ಆಫ್ ಚೀನಾ ಡೆವಲಪ್ಮೆಂಟ್ ಬ್ಯಾಂಕ್(ಸಿಡಿಬಿ) ಜತೆಗಿನ ಎಲ್ಲಾ ಔಪಚಾರಿಕತೆಗಳೂ ಪೂರ್ಣಗೊಂಡಿದ್ದು ಈ ವಾರ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಖಾತೆಗೆ ಜಮೆಯಾಗುವ ನಿರೀಕ್ಷೆಯಿದೆ. ಇದರಿಂದ ವಿದೇಶಿ ವಿನಿಮಯ ದಾಸ್ತಾನು ಕೊರತೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ವಿತ್ತಸಚಿವರು ಹೇಳಿದ್ದಾರೆ. ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ನಲ್ಲಿ ಕೇವಲ 3.2 ಶತಕೋಟಿ ಡಾಲರ್ ವಿದೇಶಿ ವಿನಿಮಯ ದಾಸ್ತಾನಿದ್ದು 3 ವಾರಗಳ ಆಮದಿಗೆ ಮಾತ್ರ ಸಾಕಾಗಬಹುದು ಎಂದು ಫೆಬ್ರವರಿ 10ರಂದು ಪಾಕ್ ಸರಕಾರ ಹೇಳಿತ್ತು.
Next Story