ಮಾರ್ಚ್ 2 ರಿಂದ ಮುಹಿಮ್ಮಾತಿನಲ್ಲಿ ಉರೂಸ್
ಕಾಸರಗೋಡು: ಮುಹಿಮ್ಮಾತ್ ಸ್ತಾಪಕರೂ ಆಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ 17 ನೇ ಉರೂಸ್ ಹಾಗೂ ಮುಹಿಮ್ಮಾತ್ ಸನದ್ ದಾನ ಸಮ್ಮೇಳನವು ಮಾರ್ಚ್ 2 ರಿಂದ 5ರವರೆಗೆ ಮುಹಿಮ್ಮಾತಿನಲ್ಲಿ ನಡೆಯಲಿದೆ.
ಝಿಯಾರತ್, ದೌರತುಲ್ ಖುರ್ ಆನ್, ಮತ ಪ್ರಬಾಷಣ, ರಾತೀಬ್, ತಮಿಳು ಸಮ್ಮೇಳನ, ಸ್ವಲಾತ್ ಮಜ್ಲಿಸ್ ಮುಂತಾದ ಹಲವು ಕಾರ್ಯಗಳು ಉರೂಸ್ ಭಾಗವಾಗಿ ನಡೆಯಲಿದೆ.
ಮಾರ್ಚ್ 2 ಬೆಳಿಗ್ಗೆ 9:30 ಕ್ಕೆ ಸ್ವಾಗತ ಸಂಗ ಚೇರ್ಮನ್ ಪಿ.ಎ ಅಬ್ದುಸ್ಸಲಾಂ ದಾರಿಮಿ ಕುಬನೂರ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ ಅಹ್ದಲ್ ಮಖಾಂ ಝಿಯಾರತಿಗೆ ಸಯ್ಯಿದ್ ಖಾಸಿಂ ಅಲ್ ಅಹ್ದಲ್ ನೇತೃತ್ವ ನೀಡಲಿದ್ದಾರೆ. ಸಂಜೆ 4 ಕ್ಕೆ ದೌರತುಲ್ ಕುರ್ ಆನ್ ಸದಸ್ಸಿಗೆ ಸಯ್ಯಿದ್ ಕುಂಞಿಕೋಯ ತಂಙಳ್ ಮುಟ್ಟಂ, ಸಯ್ಯಿದ್ ಅಥಾವುಲ್ಲ ತಂಙಳ್ ಉದ್ಯಾವರ, ಸಯ್ಯಿದ್ ಮುಹಮ್ಮದ್ ಇಬ್ರಾಹಿಂ ಪೂಕುಂಞಿ ತಂಙಳ್ ಕಲ್ಲಕಟ್ಟ ನೇತೃತ್ವ ನೀಡಲಿದ್ದಾರೆ.
ಪಲ್ಲಂಗೋಡ್ ಅಬ್ದುಲ್ ಕಾದಿರ್ ಮದನಿಯವರ ಅಧ್ಯಕ್ಷತೆಯಲ್ಲಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಉರೂಸ್ ಉದ್ಘಾಟಿಸಲಿದ್ದಾರೆ. ರಾತ್ರಿ ಸ್ವಲಾತ್ ಮಜ್ಲಿಸಿಗೆ ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಪಿ.ಎಸ್ ಆಟ್ಟಕ್ಕೋಯ ತಂಙಳ್ ಪಂಜಿಕ್ಕಲ್ ನೇತೃತ್ವ ನೀಡಲಿದ್ದಾರೆ.
ರಾತ್ರಿ 8:30 ಕ್ಕೆ ಹಾಫಿಳ್ ಮಶ್ಹೂದ್ ಸಖಾಫಿ ಗೂಡಲ್ಲೂರ್ ಮತಪ್ರಭಾಷಾಣ ಮಾಡಲಿದ್ದಾರೆ. ಸಿ.ಎನ್ ಅಬ್ದುಲ್ ಕಾದಿರ್ ಮಾಸ್ಟರ್ ಅದ್ಯಕ್ಷತೆ ವಹಿಸಲಿದ್ದಾರೆ.
ಮಾರ್ಚ್ 3 ರಾತ್ರಿ 7 ಗಂಟೆಗೆ ರಿಫಾಈ ರಾತೀಬಿಗೆ ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದ್ರೋಸಿ ತಂಙಳ್ ನೇತೃತ್ವ ನೀಡಲಿದ್ದಾರೆ. ರಾತ್ರಿ 8:30 ಕ್ಕೆ ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್ ಪ್ರಭಾಷಣ ಮಾಡಲಿದ್ದಾರೆ. ಹಾಜಿ ಅಮೀರಲಿ ಚೂರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾರ್ಚ್ 4 ಬೆಳಿಗ್ಗೆ 9:30ಕ್ಕೆ ತಮಿಳು ಸಮ್ಮೇಳನ ಮನ್ಸೂರ್ ಹಾಜಿ ಚೆನೈ ಯವರ ಅಧ್ಯಕ್ಷತೆಯಲ್ಲಿ ತಮಿಳುನಾಡು ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಕಯ್ಯಲ್ ಪಟ್ಟನಂ ಉದ್ಘಾಟಿಸಲಿದ್ದಾರೆ.
ರಾತ್ರಿ 7 ಕ್ಕೆ ಮುಹ್ಯದ್ದೀನ್ ರಾತೀಬಿಗೆ ಸಯ್ಯಿದ್ ಫಾರೂಕುದ್ದೀನ್ ಹದ್ದಾದ್ ತಂಙಳ್ ನೇತೃತ್ವ ನೀಡಲಿದ್ದಾರೆ. ರಾತ್ರಿ 8:30 ಕ್ಕೆ ನೌಫಲ್ ಸಖಾಫಿ ಕಳಸ ಪ್ರಭಾಷಣ ಮಾಡಲಿದ್ದಾರೆ. ಎಂ ಅಂದುಂಞಿ ಮುಗರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾರ್ಚ್ 5ರ ಬೆಳಗ್ಗೆ 9ಕ್ಕೆ ಹಿಮಮಿ ಸ್ಥಾನ ವಸ್ತ್ರ ವಿತರಣಾ ಕಾರ್ಯಕ್ರಮವು ಮುಹಮ್ಮದಲಿ ಸಖಾಫಿ ತೃಕರಿಪುರ್ ಉಸ್ತಾದರ ಅಧ್ಯಕ್ಷತೆಯಲ್ಲಿ ಕುಂಞಿ ಮುಹಮ್ಮದ್ ಸಖಾಫಿ ಪರವೂರ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ವಿತರಣೆ ಉದ್ಘಾಟನೆ ಮಾಡಲಿದ್ದಾರೆ. ಹಾಫಿಳ್ ಸ್ಥಾನ ವಸ್ತ್ರ ವಿತರಣೆ ಖಾಸಿಂ ಮದನಿ ಕೂರಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಉದ್ಘಾಟನೆ ಮಾಡಲಿದ್ದಾರೆ. ವಿತರಣಾ ಗಡನ ಸಯ್ಯಿದ್ ಇಬ್ರಾಹಿಂ ಅಲ್ ಹಾದಿ ಚೂರಿ ನೆರವೇರಿಸಲಿದ್ದಾರೆ.
ಬೆಳಿಗ್ಗೆ 10 ಕ್ಕೆ ಮೌಲಿದ್ ಮಜ್ಲಿಸಿಗೆ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕನ್ನವಂ, ಸಯ್ಯಿದ್ ಶಹೀರ್ ಅಲ್ ಬುಖಾರಿ, ಸಯ್ಯಿದ್ ಅಹ್ಮದ್ ಜಮಲುಲ್ಲೈಲಿ ತಂಙಳ್ ಕರ, ಸಯ್ಯಿದ್ ಜಲಾಲುದ್ದೀನ್ ಸ ಅದಿ ತಂಙಳ್ ಮಳ್ಹರ್ ನೇತೃತ್ವ ನೀಡಲಿದ್ದಾರೆ. 11 ಗಂಟೆಗೆ ಖತ್ಮುಲ್ ಕುರ್ಆನ್ ಮಜ್ಲಿಸಿಗೆ ಸ್ವಾಲಿಹ್ ಸ ಅದಿ ತಲಿಪ್ಪರಂಬ್ ನೇತೃತ್ವ ನೆಡಲಿದ್ದಾರೆ. ಮಧ್ಯಾಹ್ನ 2 ಕ್ಕೆ ಪೂರ್ವ ವಿದ್ಯಾರ್ಥಿ ಸಂಗಮ ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳರ ಅಧ್ಯಕ್ಷತೆಯಲ್ಲಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ಉದ್ಘಾಟನೆ ಮಾಡಲಿದ್ದಾರೆ.
ಸಯ್ಯಿದ್ ಹಾಮುದ್ ಅನ್ವರ್ ಅಹ್ದಲ್ ತಂಙಳ್ ವಿಷಯ ಮಂಡಿಸಲಿದ್ದಾರೆ. ಸಂಜೆ 4:30 ಕೂಟು ಝಿಯಾರತಿಗೆ ಸಯ್ಯಿದ್ ಅಬ್ದುಲ್ಲಾ ಕೋಯ ತಂಙಳ್ ನೇತೃತ್ವ ನೀಡಲಿದ್ದಾರೆ. ಸಂಜೆ 5 ಕ್ಕೆ ಅಹ್ದಲಿಯ್ಯ ಆತ್ಮೀಯ ಸನದ್ ದಾನ ಸಮ್ಮೇಳನ ಸಯ್ಯಿದ್ ಅಲೀ ಬಾಫಕೀ ತಂಙಳರ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಸಯ್ಯಿದ್ ಹಸನುಲ್ ಅಹ್ದಲ್ ತಂಙಳರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಉದ್ಘಾಟನೆ ಮಾಡಲಿದ್ದಾರೆ.
ಬಿ.ಎಸ್ ಅಬ್ದುಲ್ಲಾ ಕುಂಞಿ ಫೈಝಿ ಮುನ್ನುಡಿ ಭಾಷಣ ಹಾಗೂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಲಿದ್ದಾರೆ. ಸಮಸ್ತ ಅಧ್ಯಕ್ಷರಾದ ಇ. ಸುಲೈಮಾನ್ ಮುಸ್ಲಿಯಾರ್ ಸನದ್ ದಾನ ನಿರ್ವಹಿಸಿ ಸನದ್ ದಾನ ಪ್ರಭಾಷಣ ಮಾಡಲಿದ್ದಾರೆ.
ಪೊನ್ಮಳ ಅಬ್ದುಲ್ ಕಾದಿರ್ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ, ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾನಿಕೋತ್, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಿ ಮುಹಮ್ಮದ್ ಫೈಝಿ, ಮಾರಾಯಮಂಗಲಂ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಕೆ.ಪಿ ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ, ಕೆ.ಪಿ ಮುಹಮ್ಮದ್ ಮುಸ್ಲಿಯಾರ್ ಕೊಂಬಂ, ವಿ ಪಿ ಎಂ ಫೈಝಿ ವೀಳ್ಯಪಲ್ಲಿ, ಡಾ. ಹುಸೈನ್ ಸಖಾಫಿ ಚುಲ್ಲಿಕ್ಕೋಡ್, ಡಾ. ಎ.ಪಿ ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ, ಮುಹಮ್ಮದಲಿ ಸಖಾಫಿ ತೃಕರಿಪುರ್, ಫಿರ್ದೌಸ್ ಸಖಾಫಿ ಕಡವತ್ತೂರ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಪ್ರಭಾಷಣ ಮಾಡಲಿದ್ದಾರೆ.
ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರ್ ನೇತೃತ್ವ ನೀಡಲಿದ್ದಾರೆ.