ಉಡುಪಿ: ಕಕ್ಕುಂಜೆ ಪಾದೆಯ ಗುಡ್ಡದ ಬಳಿ ಬೆಂಕಿ ಅವಘಡ
ಉಡುಪಿ: ಉಡುಪಿ ಕಕ್ಕುಂಜೆಯ ಪಾದೆಯ ಬಳಿ ಕಸದ ರಾಶಿಗೆ ಆಕಸ್ಮಿತವಾಗಿ ಬೆಂಕಿ ತಗಲಿ ಸುತ್ತಮುತ್ತಲಿನ ಇಡೀ ಪರಿಸರದಲ್ಲಿ ಹೊಗೆಯ ವಾತಾವರಣ ನಿರ್ಮಾಣವಾಯಿತು.
ಖಾಲಿ ಪಾದೆಯ ಗುಡ್ಡದಲ್ಲಿ ಒಣ ಕಸ ಯಥೇಚ್ಛವಾಗಿ ಕಂಡುಬಂದಿದ್ದು, ಇದಕ್ಕೆ ಬೆಂಕಿ ಹಚ್ಚಿಕೊಂಡಿದೆ. ಇಲ್ಲಿನ ಬೆಂಕಿ ಹತ್ತಿರದ ಮನೆಯ ಕಂಪೌಂಡ್ ಗೋಡೆಯೊಳಗಿನ ಒಣಗಿದಗಿಡಗಳಿಗೂ ಹಬ್ಬಿತು.
ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಉಡುಪಿಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಮುಂದೆ ನಡೆಯಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದರು. ಭಾರೀ ಗಾಳಿಯಿಂದ ಬೆಂಕಿಯ ಹೊಗೆ ಇಡೀ ಪರಿಸರ ಹಬ್ಬಿರುವುದು ಕಂಡು ಬಂತು.
Next Story