ಮಹಿಳಾ ಪ್ರೀಮಿಯರ್ ಲೀಗ್: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಗುಜರಾತ್‌ಗೆ ರೋಚಕ ಜಯ
ಮುಂಬೈ, ಮಾ.8: ಸೋಫಿ ಡಿವೈನ್ ಅರ್ಧಶತಕದ(66 ರನ್, 45 ಎಸೆತ)ಕೊಡುಗೆಯ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲುಪಿಎಲ್‌ನ 6ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 11 ರನ್ ಅಂತರದಿಂದ ಸೋತಿದೆ.
ಗೆಲ್ಲಲು 202 ಗುರಿ ಪಡೆದ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ.
ಆರ್‌ಸಿಬಿ ಪರ ಎಲ್ಲಿಸ್ ಪೆರ್ರಿ(32 ರನ್),ಹೀದರ್ ನೈಟ್(ಔಟಾಗದೆ 30)ಎರಡಂಕೆಯ ಸ್ಕೋರ್ ಗಳಿಸಿದರು.
ಬೌಲಿಂಗ್ ವಿಭಾಗದಲ್ಲಿ ಅಶ್ಲೆ ಗಾರ್ಡನರ್(3-31)ಹಾಗೂ ಸದರ್‌ಲ್ಯಾಂಡ್(2-56)ಐದು ವಿಕೆಟ್ ಹಂಚಿಕೊಂಡರು.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು.
Next Story