ರಮಝಾನ್ ನಲ್ಲಿ ಉರ್ದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಶಾಲಾವಧಿ ಬದಲಾಯಿಸುವಂತೆ ಐಟಾ ಮನವಿ
ಭಟ್ಕಳ: ಮಾರ್ಚ್ 23 ರಿಂದ ಪವಿತ್ರ ರಮಝಾನ್ ಮಾಸ ಆರಂಭಗೊಳ್ಳುತ್ತಿದ್ದು ತಿಂಗಳು ಪೂರ್ತಿ ವಿದ್ಯಾರ್ಥಿ ಮತ್ತು ಶಿಕ್ಷಕರು ದಿನದ 13-14 ಗಂಟೆಗಳ ಉಪವಾಸ ವೃತ (ರೋಜಾ) ಆಚರಿಸುತ್ತಾರೆ. ಈ ಸಮಯದಲ್ಲಿ ರಾಜ್ಯದ ಎಲ್ಲ ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಶಾಲಾವಧಿಯನ್ನು ಬೆಳಗಿನ ಜಾವ ನಡೆಸುವಂತೆ ಅನುವು ಮಾಡಿಕೊಬೇಕೆಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಅವರು ನಿರ್ದೇಶಕರು ಉರ್ದು ಹಾಗೂ ಇತರೆ ಭಾಷಾ ಅಲ್ಪಸಂಕ್ಯಾತ ನಿರ್ದೇಶನಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಿರುವ ಅವರು, ರಮಝಾನ ಮಾಸದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಉಪವಾಸವೃತ ಆರಚಣೆಗೆ ಅಡ್ಡಿಯಾಗಬಹುದು. ಆದ್ದರಿಂದ ದೈನಂದಿನ ಶಾಲಾ ಅವಧಿಯಲ್ಲಿ ಎರಡು ಅವಧಿಯನ್ನು ಕಡಿತಗೊಳಿಸಿ ಬೆಳಗಿನ ಸಮಯದಲ್ಲಿ ಶಾಲೆಯನ್ನು ನಡೆಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮಾ.23ರಿಂದ ಆರಂಭಗೊಳ್ಳುವ ಉಪವಾಸ ಹಿನ್ನೆಲೆಯಲ್ಲಿ ರಮಝಾನ್ ಮಾಸ ಮುಗಿಯುವವರೆಗೂ ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ (ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ) ಬೆಳಗಿನ ಜಾವ ಶಾಲೆಗಳನ್ನು ನಡೆಸಲು ಅನುಮತಿ ನೀಡುವುದರ ಜೊತೆಗೆ ಶಾಲಾ ಅವಧಿಯನ್ನೂ ಕಡಿತಗೊಳಿಸಬೇಕೆಂದು ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(ರಿ) ಕರ್ನಾಟಕ ದ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.