ನಾಲ್ಕನೇ ಟೆಸ್ಟ್: ಭಾರತ 571 ರನ್‌ಗೆ ಆಲೌಟ್, ಇನಿಂಗ್ಸ್ ಮುನ್ನಡೆ
ಅಹಮದಾಬಾದ್, ಮಾ.12: ಮಾಜಿ ನಾಯಕ ವಿರಾಟ್ ಕೊಹ್ಲಿ(186 ರನ್, 364 ಎಸೆತ)ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 571 ರನ್‌ಗೆ ಆಲೌಟಾಗಿದೆ. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 91 ರನ್ ಮುನ್ನಡೆ ಪಡೆದಿದೆ.
ನಾಲ್ಕನೇ ದಿನವಾದ ರವಿವಾರ 3 ವಿಕೆಟ್ ನಷ್ಟಕ್ಕೆ 289 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತದ ಪರ ವಿರಾಟ್ ಕೊಹ್ಲಿ 28ನೇ ಶತಕ(186 ರನ್) ಗಳಿಸಿದರು. ಸ್ಥಳೀಯ ಆಟಗಾರ ಅಕ್ಷರ್ ಪಟೇಲ್(79 ರನ್, 113 ಎಸೆತ) ಹಾಗೂ ವಿಕೆಟ್‌ಕೀಪರ್ ಶ್ರೀಕರ್ ಭರತ್ (44 ರನ್) ತಂಡವನ್ನು ಆಧರಿಸಿದರು. ಆಸೀಸ್ ಪರ ಕ್ಯಾಮರೂನ್ ಗ್ರೀನ್(3-151) ಹಾಗೂ ಟಾಡ್ ಮುರ್ಫಿ(3-113)ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು.
ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸಿ ಆಲೌಟಾಗಿತ್ತು.
Next Story