Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಆಸ್ಕರ್‌ ವಿಜೇತ 'ದಿ ಎಲಿಫೆಂಟ್‌...

ಆಸ್ಕರ್‌ ವಿಜೇತ 'ದಿ ಎಲಿಫೆಂಟ್‌ ವಿಸ್ಪರರ್ಸ್'ನಲ್ಲಿ ಕಾಣಿಸಿಕೊಂಡ ದಂಪತಿ ಇನ್ನೂ ಸಾಕ್ಷ್ಯಚಿತ್ರ ನೋಡಿಲ್ಲ

13 March 2023 5:59 PM IST
share
ಆಸ್ಕರ್‌ ವಿಜೇತ ದಿ ಎಲಿಫೆಂಟ್‌ ವಿಸ್ಪರರ್ಸ್ನಲ್ಲಿ ಕಾಣಿಸಿಕೊಂಡ ದಂಪತಿ ಇನ್ನೂ ಸಾಕ್ಷ್ಯಚಿತ್ರ ನೋಡಿಲ್ಲ

ಹೊಸದಿಲ್ಲಿ: ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಪಾತ್ರವಾಗಿರುವ ಭಾರತದ ಕಿರು ಸಾಕ್ಷ್ಯಚಿತ್ರ 'ದಿ ಎಲಿಫೆಂಟ್‌ ವಿಸ್ಪರರ್ಸ್' (Elephant Whisperers) ಇದರಲ್ಲಿ ತಮಿಳುನಾಡಿನ ಮುದುಮಲೈನಲ್ಲಿ ತನ್ನ ಹಿಂಡಿನಿಂದ ಪ್ರತ್ಯೇಕಗೊಂಡ ಮರಿಯಾನೆಯನ್ನು ಸಲಹುವ ದಂಪತಿ ಬೊಮ್ಮನ್‌ ಮತ್ತು ಬೆಳ್ಳಿ ಇನ್ನೂ ಈ ಸಾಕ್ಷ್ಯಚಿತ್ರ ವೀಕ್ಷಿಸಿಲ್ಲ.

ಸಾಕ್ಷ್ಯಚಿತ್ರದಲ್ಲಿ ಕಾಣಿಸಿರುವ ಬೊಮ್ಮನ್‌ (54) ಪ್ರತಿಕ್ರಿಯಿಸಿ,  ಆನೆಗಳನ್ನು ನೋಡಿಕೊಳ್ಳುವುದರಲ್ಲೇ ಸಮಯ ಕಳೆಯುವುದರಿಂದ ಸಾಕ್ಷ್ಯಚಿತ್ರ ವೀಕ್ಷಿಸಲು ಸಮಯ ದೊರಕಿಲ್ಲ ಎನ್ನುತ್ತಾರೆ. "ನನಗೆ ಈಗಲೂ ಇದರ ಬಗ್ಗೆ (ಆಸ್ಕರ್)‌ ಏನೂ ಗೊತ್ತಿಲ್ಲ," ಎಂದು ಧರ್ಮಪುರಿಯಲ್ಲಿರುವ ಬೊಮ್ಮನ್‌ ಹೇಳುತ್ತಾರೆ.

"ಆದರೆ ಇದು ತುಂಬಾ ಮುಖ್ಯ ಹಾಗೂ ಈ ಸಾಕ್ಷ್ಯಚಿತ್ರ ಭಾರತಕ್ಕೆ ಬಹಳಷ್ಟು ಹೆಮ್ಮೆ ತಂದಿದೆ ಎಂದು ಎಲ್ಲರೂ ಹೇಳುವುದು ಕೇಳಿಸಿಕೊಂಡಿದ್ದೇನೆ," ಎಂದು ಬೊಮ್ಮನ್‌ ಹೇಳುತ್ತಾರೆ.

ಆನೆಗಳ ರಕ್ಷಣೆ ಕಾರ್ಯವಿದ್ದರೆ ಮಾತ್ರ ಬೊಮ್ಮನ್‌ ಮುದುಮಲೈ ಬಿಟ್ಟು ತೆರಳುತ್ತಾರೆ ಎಂದು hindustantimes ತಿಳಿಸಿದ್ದಾರೆ.

ಈ 40 ನಿಮಿಷ ಅವಧಿಯ ಸಾಕ್ಷ್ಯಚಿತ್ರವನ್ನು ನೀಲಗಿರಿ ಜಿಲ್ಲೆಯ ಮುದುಮಲೈ ಅರಣ್ಯದಲ್ಲಿ ಚಿತ್ರೀಕರಿಸಲಾಗಿದೆ. ಬೊಮ್ಮನ್‌ ದಂಪತಿ ಮೊದಲು ಮರಿಯಾನೆ ರಾಘುವಿನ ಆರೈಕೆ ಮಾಡುವುದು ಹಾಗೂ ನಂತರ ಮೂರು ತಿಂಗಳು ಪ್ರಾಯದ ಅಮ್ಮು ಆನೆಯ ಆರೈಕೆ ಮಾಡುವುದನ್ನು ತೋರಿಸಲಾಗಿದೆ.

ತಮಿಳುನಾಡು ಅರಣ್ಯ ಇಲಾಖೆಯ ಉದ್ಯೋಗಿಯಾಗಿರುವ ಬೊಮ್ಮನ್‌ ಮತ್ತವರ ಪತ್ನಿ ಬೆಳ್ಳಿ, ಸಾಕ್ಷ್ಯಚಿತ್ರದಲ್ಲಿ ಕಾಣಿಸಿರುವ ಆನೆಮರಿಗಳು ತಮ್ಮ ಮಕ್ಕಳಂತೆ ಎಂದು ಹೇಳುತ್ತಾರೆ.

"ರಾಘು ಮತ್ತು ಅಮ್ಮುವಿನ ಆರೈಕೆಯನ್ನು ಬೇರೊಬ್ಬರಿಗೆ  ವಹಿಸಿದ್ದರಿಂದ ಅವುಗಳನ್ನು ಮಿಸ್‌ ಮಾಡಿಕೊಳ್ಳುತ್ತೇವೆ. ಆದರೆ ಇದು ಸರ್ಕಾರಿ ನೌಕರಿ. ನನಗೆ ವಾಪಸ್‌ ಕೊಡಿ ಎಂದು ಹೇಳಲಾಗದು," ಎಂದು ಬೊಮ್ಮನ್‌ ಹೇಳುತ್ತಾರೆ.

ಇಲ್ಲಿಯ ತನಕ ಸುಮಾರು 84 ಆನೆಗಳ ಆರೈಕೆ ಮಾಡಿರುವುದಾಗಿ ಬೊಮ್ಮನ್‌ ಹೇಳುತ್ತಾರೆ. "ಸಾಕ್ಷ್ಯಚಿತ್ರಕ್ಕಾಗಿ ಆಗೀಗ ಚಿತ್ರೀಕರಣವನ್ನು ಸಹಜವಾಗಿ ನಡೆಸಲಾಗುತ್ತಿತ್ತು., ಸುಮಾರು ಐದು ಜನರು ಬಂದು ನಾವು ಕೆಲಸ  ಮಾಡುತ್ತಿದ್ದಾಗ ಚಿತ್ರೀಕರಣ ಮಾಡಿ ವಾಪಸಾಗಿ ಮತ್ತೆ ಬರುತ್ತಿದ್ದರು," ಎಂದು ಬೊಮ್ಮನ್‌ ಹೇಳುತ್ತಾರೆ.

ಈ ಸಾಕ್ಷ್ಯಚಿತ್ರ ಚಿತ್ರೀಕರಣದ ಸಂದರ್ಭದಲ್ಲಿಯೇ ದಂಪತಿ ತಮ್ಮ ಮಗನನ್ನು ಕಳೆದುಕೊಂಡಿದ್ದರು. ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್‌ ಜೊತೆ ಅವರು ಇನ್ನಷ್ಟೇ ಮಾತನಾಡಬೇಕಿದೆ.

ಆಸ್ಕರ್‌ ಪ್ರಶಸ್ತಿ ಎಂದರೇನು ಎಂದು ತಿಳಿದಿರದೇ ಇದ್ದರೂ ಪ್ರಶಸ್ತಿ ದೊರಕಿದ್ದು ಖುಷಿಯಾಗಿದೆ ಎಂದು ಬೆಳ್ಳಿ ಹೇಳುತ್ತಾರೆ.

share
Next Story
X