ಅಪರಿಚಿತ ವ್ಯಕ್ತಿಯ ಅನುಮಾನಾಸ್ಪದ ಸಾವು: ಪ್ರಕರಣ ದಾಖಲು
ಉಡುಪಿ : ಕಲ್ಸಂಕ ವೃತ್ತದ ಬಳಿಯ ಕಾಮಗಾರಿ ಸ್ಥಗಿತವಾಗಿರುವ ಬಹುಮಹಡಿ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಮೃತದೇಹದ ಮೈಮೇಲೆ ಗಾಯಗಳು ಕಂಡುಬಂದಿರುವುದ ರಿಂದ ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಅಂದಾಜು 30-35 ವರ್ಷ ಪ್ರಾಯದ ಈ ಅಪರಿಚಿತ ವ್ಯಕ್ತಿಯ ಹೊಟ್ಟೆ ಹಾಗೂ ಹಣೆಯ ಭಾಗದಲ್ಲಿ ಗಾಯಗಳು ಕಂಡು ಬಂದಿವೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತರ ಜೇಬಿನಲ್ಲಿ ಸುರತ್ಕಲಿನಿಂದ ಉಡುಪಿ ಪ್ರಯಾಣಿಸಿರುವ ಬಸ್ಸಿನ ಟಿಕೇಟ್ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ದ್ದಾರೆ. ಈ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಧಿ ವಿಧಾನ ತಜ್ಞರು ಸ್ಥಳಕ್ಕೆ ಬಂದು ಪರಿಶೀಲಿನೆ ನಡೆಸಿದ್ದಾರೆ. ಮೃತದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಮಣಿಪಾಲದ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು. ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.