ಮಾ16-17: ಪಡುಬಿದ್ರಿ ನೂರಾನಿಯಾ ಹನಫಿ ಜಾಮಿಯಾ ಮಸೀದಿ ಉದ್ಘಾಟನೆ
ಪಡುಬಿದ್ರಿ: ಇಲ್ಲಿನ ದೀನ್‌ಸ್ಟ್ರೀಟ್‌ನಲ್ಲಿ ನೂತನವಾಗಿ ನಿರ್ಮಾಣಶಗೊಂಡ ನೂರಾನಿಯಾ ಹನಫಿ ಜಾಮಿಯಾ ಮಸ್ಜಿದ್ ಇದರ ಉದ್ಘಾಟನಾ ಸಮಾರಂಭ ಮಾರ್ಚ್ 16 ಮತ್ತು 17ರಂದು ನಡೆಯಲಿದೆ.
16ರಂದು ಸಂಜೆ 5.30ಕ್ಕೆ ಮೌಲಾನಾ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಲಿದ್ದಾರೆ. ಪಡುಬಿದ್ರಿ ಜುಮ್ಮಾ ಮಸೀದಿ ಕತೀಬ್ ಎಸ್.ಎಂ. ಅಬ್ದುಲ್ ರಹಿಮಾನ್ ಮದನಿ ಪ್ರಭಾಷಣ ಮಾಡಲಿದ್ದಾರೆ. ನೂರಾನಿಯಾ ಹನಫಿ ಜುಮ್ಮಾ ಮಸ್ಜಿದ್ ಖತೀಬ್ ಮೆಹಬೂಬ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ. ನೂರಾನಿಯಾ ಮಸೀದಿಯ ಪೇಶ್ ಇಮಾಮ್ ಅಬ್ದುಲ್ ಖುದ್ದೂಸ್ ದುವಾ ನೆರವೇರಿಸಲಿದ್ದಾರೆ.
ಅನಿವಾಸಿ ಉದ್ಯಮಿ ಇಬ್ರಾಹಿಂ ಮುಹಮ್ಮದ್ ಇಬ್ರಾಹಿಂ, ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮೊಯಿದಿನ್, ಕಂಚಿನಡ್ಕ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ಮುಹಮ್ಮದ್ ಶರೀಫ್ ಮೂಡಬಿದ್ರಿ, ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಶಬ್ಬೀರ್ ಹುಸೇನ್, ಜಮೀಯತುಲ್ ಫಲಾಹ್ ಅಧ್ಯಕ್ಷ ಶಭಿ ಅಹಮದ್ ಕಾಝಿ ಮತ್ತಿತರರು ಭಾಗವಹಿಸಲಿದ್ದಾರೆ.
17ರಂದು ಬೆಳಗ್ಗೆ 9ರಿಂದ ಸೌಹಾರ್ದ ಸಂಗಮ ನಡೆಯಲಿದ್ದು, ಪಡುಬಿದ್ರಿ ಜುಮ್ಮಾ ಮಸೀದಿ ಅದ್ಯಕ್ಷ ಹಾಜಿ ಪಿ.ಕೆ. ಮೊಹಿದ್ದೀನ್ ಲಚ್ಚಿಲ್ ಉದ್ಘಾಟಿಸಲಿದ್ದಾರೆ. ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಮಸೀದಿಯ ಜುಮಾ ನಮಾಝಿನ ನೇತೃತ್ವ ಹಾಗೂ ವಕ್ಫ್ ವಿಧಿನಿರ್ವಹಣೆಯನ್ನು ಮೌಲಾನಾ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.