ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಮದರಸಾಗಳು ಬಂದ್: ಶಾಸಕ ಯತ್ನಾಳ್
ಬೆಳಗಾವಿ: ಅಸ್ಸಾಮಿನಲ್ಲಿ ಮದರಸಾಗಳನ್ನು ಮುಚ್ಚುವುದಾಗಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮದರಸ ಬಂದ್ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಂದಿನ ಸಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ರೀತಿ ರಾಜ್ಯದ ಸಂಪೂರ್ಣ ಮದರಸಾಗಳನ್ನು ಬಂದ್ ಮಾಡುತ್ತೇವೆ. ಹಿಂದೂಗಳಿಗೆ ಇರುವುದು ಭಾರತ ಮಾತ್ರ. ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣ. ಶಿವಾಜಿ ಇಲ್ಲದಿದ್ದರೆ, ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅಭಯ್ ಪಾಟೀಲ್, ಅಝರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಮದ್ರಸಾಗಳು ಅಗತ್ಯವಿಲ್ಲ, ಅದಕ್ಕಾಗಿ 600 ಮದ್ರಸಾಗಳನ್ನು ಮುಚ್ಚಿಸಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
Next Story