ಮೊದಲ ಏಕದಿನ: ಆಸ್ಟ್ರೇಲಿಯ 188 ರನ್‌ಗೆ ಆಲೌಟ್
ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್‌ಗೆ ತಲಾ ಮೂರು ವಿಕೆಟ್
ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್‌ಗೆ ತಲಾ ಮೂರು ವಿಕೆಟ್
ಮುಂಬೈ, ಮಾ.17: ವೇಗಿ ಮುಹಮ್ಮದ್ ಶಮಿ(3-17) ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 35.4 ಓವರ್‌ಗಳಲ್ಲಿ ಕೇವಲ 188 ರನ್‌ಗೆ ಆಲೌಟಾಗಿದೆ.
ವಾಂಖೆಡೆ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯದ ಪರ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್(81 ರನ್, 65 ಎಸೆತ, 10 ಬೌಂಡರಿ, 5 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಜೋಶ್ ಇಂಗ್ಲಿಸ್(26 ರನ್), ಸ್ಟೀವನ್ ಸ್ಮಿತ್(22 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಬೌಲಿಂಗ್‌ನಲ್ಲಿ ವೇಗಿದ್ವಯರಾದ ಶಮಿ(3-17) ಹಾಗೂ ಹಾಗೂ ಮುಹಮ್ಮದ್ ಸಿರಾಜ್(3-29) ತಲಾ 3 ವಿಕೆಟ್‌ಗಳನ್ನು ಪಡೆದರೆ, ರವೀಂದ್ರ ಜಡೇಜ(2-46), ಹಾರ್ದಿಕ್ ಪಾಂಡ್ಯ(1-29) ಹಾಗೂ ಕುಲದೀಪ್ ಯಾದವ್(1-48)ಉಳಿದ ವಿಕೆಟ್‌ಗಳನ್ನು ಕಬಳಿಸಿದರು.
Next Story