ಕರ್ನಾಟಕದಲ್ಲೂ ರಿಯಾಯಿತಿ ಸೌಲಭ್ಯ ನೀಡಲು ಸರಕಾರಿ ನೌಕರರ ಸಂಘ ಮನವಿ
ಉಡುಪಿ, ಮಾ.18: ಕರ್ನಾಟಕ ಸರಕಾರ ಮಹಾರಾಷ್ಟ್ರ ಸರಕಾರದಂತೆ ರಿಯಾಯಿತಿ ಸೌಲಭ್ಯವನ್ನು ನೀಡುವಂತೆ ಸರಕಾರಿ ನೌಕರರ ರಾಜ್ಯ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಎಸ್.ತೋನ್ಸೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಸರಕಾರ 2023-2024ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಸ್ತಾಪ ಮಾಡಿದಂತೆ ಮಹಿಳೆಯರಿಗೆ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣ ಮಾಡಲು ಶೇ.50 ರಿಯಾಯಿತಿ ನೀಡಲಾಗಿದೆ. ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ 65ರಿಂದ 75ವರ್ಷದ ಹಿರಿಯ ನಾಗರಿಕ ರಿಗೆ ಉಚಿತ ಪ್ರಮಾಣದ ಸೌಲಭ್ಯ ನೀಡಲಿರುವುದು ವಿಶೇಷ ರಿಯಾಯಿತಿ ಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story