ಉಡುಪಿ
ಗಂಗೊಳ್ಳಿ : ರೈಲು ಹಳಿ ಸಮೀಪ ಯುವಕನ ಮೃತದೇಹ ಪತ್ತೆ
ವಾರ್ತಾ ಭಾರತಿ : 18 Mar, 2023

ಗಂಗೊಳ್ಳಿ, ಮಾ.18: ಸುಮಾರು 25-30 ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ಇಂದು ಬೆಳಗ್ಗೆ ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿರುವ ರೈಲ್ವೆ ಸೇತುವೆ ಸಮೀಪದ ರೈಲ್ವೇ ಹಳಿಯ ಪಕ್ಕದ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಪೊಲೀಸರು ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಹೊರತೆಗೆದು ಸಾಗಿಸಲು ಇಬ್ರಾಹಿಂ ಗಂಗೊಳ್ಳಿ, ಕೃಷ್ಣ ಕಿಟ್ಟ, ಸ್ವಯಂಸೇವಕರಾದ ನದೀಮ್ ಹಾಗೂ ಸಫ್ವಾನ್, ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್ ಸಹಕರಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)