varthabharthi


ಕ್ರೀಡೆ

​ಐಎಸ್ ಎಲ್: ಬೆಂಗಳೂರಿಗೆ ಸೋಲು, ಮೋಹನ್ ಬಗಾನ್ ಗೆ ಚೊಚ್ಚಲ ಪ್ರಶಸ್ತಿ

ವಾರ್ತಾ ಭಾರತಿ : 18 Mar, 2023

PHOTO: NDTV 

ಹೊಸದಿಲ್ಲಿ, ಮಾ.18: ರವಿವಾರ ರೋಚಕವಾಗಿ ಸಾಗಿದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ಫೈನಲ್ ನಲ್ಲಿ ಬೆಂಗಳೂರು ಎಫ್ ಸಿಯನ್ನು ಪೆನಾಲ್ಟಿ ಶೂಟೌಟ್ ನಲ್ಲಿ 4-3 ಅಂತರದಿಂದ ಮಣಿಸಿದ ಎಟಿಕೆ ಮೋಹನ್ ಬಗಾನ್ ಮೊದಲ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

ಮೋಹನ್ ಬಗಾನ್ 6 ಕೋ.ರೂ. ಬಹುಮಾನ ಗೆದ್ದುಕೊಂಡಿದ್ದು, ರನ್ನರ್ಸ್ ಅಪ್ ಬೆಂಗಳೂರು ಎಫ್ ಸಿ 2.5 ಕೋ.ರೂ. ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಿಗದಿತ ಸಮಯದಲ್ಲಿ ಪಂದ್ಯವು 2-2ರಿಂದ ಸಮಬಲಗೊಂಡ  ಕಾರಣ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ನಿರ್ಧರಿಸಲಾಯಿತು. ಮೋಹನ್ ಬಗಾನ್ ನ ಡಿಮಿಟ್ರಿ ಪೆಟ್ರಾಟೊಸ್ ಎಲ್ಲ 3 ಪೆನಾಲ್ಟಿ ಗಳಿಸಿದರು.

ನಿಗದಿತ ಸಮಯದ ಆಟದಲ್ಲಿ ಪೆಟ್ರಾಟೊಸ್ 14ನೇ ಹಾಗೂ 85ನೇ ನಿಮಿಷದಲ್ಲಿ ಪೆನಾಲ್ಟಿಯಲ್ಲಿ ಗೋಲು ಗಳಿಸಿದರೆ, ಬೆಂಗಳೂರು ಪರ ನಾಯಕ ಸುನೀಲ್ ಚೆಟ್ರಿ ಪೆನಾಲ್ಟಿಯಲ್ಲಿ 45ನೇ ನಿಮಷದಲ್ಲಿ ಗೋಲು ಗಳಿಸಿದರೆ, ರಾಯ್ ಕೃಷ್ಣ 78ನೇ ನಿಮಿಷದಲ್ಲಿ ಗೋಲು ಗಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)