varthabharthi


ಕರ್ನಾಟಕ

ಸಂಸದ ಸಿದ್ದೇಶ್ವರ್ ವಿರುದ್ಧ ಕಾರ್ಯಕರ್ತರ ಆಕ್ರೋಶ: ಚನ್ನಗಿರಿಯಲ್ಲಿ ಅರ್ಧಕ್ಕೆ ಮೊಟಕುಗೊಂಡ ವಿಜಯಸಂಕಲ್ಪ ಯಾತ್ರೆ

ವಾರ್ತಾ ಭಾರತಿ : 19 Mar, 2023

ಚನ್ನಗಿರಿ : ಚನ್ನಗಿರಿಯ ಬಿಜೆಪಿಯ ಎರಡು ಬಣಗಳ ವೈಮನಸ್ಸು ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ರೇಣುಕಾಚಾರ್ಯ, ಎಂ.ಎಲ್.ಸಿ ರವಿಕುಮಾರ್ ಹೊರನಡೆದಿರುವ ಘಟನೆ ರವಿವಾರ ನಡೆದಿದೆ.  

ಹಾಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಹಾಗೂ ತಾಲೂಕು ಬಿಜೆಪಿ ವಿಧಾನಸಭಾ ಟಿಕೆಟ್ ಆಕಾಂಕ್ಷಿ ಶಿವಕುಮಾರ್ ಅವರ ಬಣ ಜಗಳದಿಂದ ಸಂಸದ ಸಿದ್ದೇಶ್ವರ ಕಾರಿನ ಹಿಂದಿನ ಗಾಜನ್ನು ಕಾರ್ಯಕರ್ತರು ಹೊಡೆದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು. ಯುವ ಮುಖಂಡ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬಿಜೆಪಿ ಕಚೇರಿಯಿಂದ ಹೊರಟ ಯಾತ್ರೆ ಬಸ್ ನಿಲ್ದಾಣ ಬರುತ್ತಿದ್ದಂತೆ ಶಿವಕುಮಾರ ಬಣ ಅಲ್ಲಿಗೆ ಆಗಮಿಸಿತು.  ಶಿವಕುಮಾರ ಅವರನ್ನು ತೆರೆದ ವಾಹನದಲ್ಲಿ ಹತ್ತಿಸಲಿಲ್ಲ ಎಂಬ ಕಾರಣಕ್ಕೆ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿ ಆಯಿತು. ಇದರಿಂದ ಬೇಸತ್ತ ನಾಯಕರುಗಳು ಯಾತ್ರೆ ಸ್ಥಗಿತ ಗೊಳಿಸಿ ಹೊರನಡೆದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಳ ಜಗಳ ಬೀದಿಗೆ ಬಂದಿದೆ. ಬಣಗಳ ತಿಕ್ಕಾಟದಿಂದ ಹಾಲಿ ಸಂಸದರು ಸೇರಿದಂತೆ ಹಲವು ನಾಯಕರು ಬಹಳಷ್ಟು ಮುಜುಗರ ಎದುರಿಸುತ್ತಿದ್ದಾರೆ.  ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಮಲ್ಲಿಕಾರ್ಜುನ ಹಾಗೂ ಶಿವಕುಮಾರ ನಡುವೆ ಬಿಜೆಪಿ ಅಭ್ಯರ್ಥಿ ಆಗಲು ಜಟಾಪಟಿ ನಡೆಸುತ್ತಿದ್ದಾರೆ. 

ಪರಸ್ಪರ ಹಾಲಿ ಶಾಸಕರ ಬೆಂಬಲಿಗರು ಹಾಗೂ ಎಚ್‍ಎಸ್. ಶಿವಕುಮಾರ್ ಬೆಂಬಲಿಗರು ಫಲಕಗಳನ್ನು ಹರಿದು ಹಾಕಿರುವ ಘಟನೆ ಸಹ ನಡೆದಿದೆ.    

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)