varthabharthi


ದಕ್ಷಿಣ ಕನ್ನಡ

ದ.ಕ. ಜಿಲ್ಲಾ ಪತ್ರಕರ್ತರ ಕ್ರೀಡಾಕೂಟ: ಕ್ರಿಕೆಟ್‌ ಪಂದ್ಯಾಟದಲ್ಲಿ ‘ವಾರ್ತಾಭಾರತಿ’ ತಂಡ ಚಾಂಪಿಯನ್

ವಾರ್ತಾ ಭಾರತಿ : 19 Mar, 2023

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್, ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಫುಟ್ಬಾಲ್ ಮೈದಾನದಲ್ಲಿ ರವಿವಾರ ಜರುಗಿದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದಲ್ಲಿ ‘ವಾರ್ತಾಭಾರತಿ’ ತಂಡ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟಗಳಿಸಿದೆ.

ತಂಡದ ಆಟಗಾರ ಮುಹಮ್ಮದ್ ನಝೀಂ ಅವರು ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದರೆ, ಜಾಫರ್ ಸಾದಿಕ್ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ಅದೇ ರೀತಿ ʼವಾರ್ತಾಭಾರತಿʼ ಮಂಗಳೂರು ಬ್ಯೂರೋ ವರದಿಗಾರ್ತಿ ಚಿತ್ರಾ ಪ್ರೀತಂ ಅವರು 100 ಮೀಟರ್ ಓಟ ಹಾಗೂ ಚಕ್ಕುಲಿ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮುಹಮ್ಮದ್ ನಝೀಂ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಗೋಣಿ ಚೀಲ ಓಟದಲ್ಲಿ ಅಸೀಬ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನೌಫಲ್ ಎಚ್. ಅದೃಷ್ಟಶಾಲಿ ಪತ್ರಕರ್ತ ಎಣಿಸಿಕೊಂಡರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)