ರಾಷ್ಟ್ರೀಯ
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಮಹಿಳೆಯ ಅಂಗಾಂಗಗಳು ಪತ್ತೆ
ವಾರ್ತಾ ಭಾರತಿ : 19 Mar, 2023

Photo: PTI
ಹೊಸದಿಲ್ಲಿ, ಮಾ.19: ದಕ್ಷಿಣ ದಿಲ್ಲಿಯ ಸರಾಯ್ ಕಾಲೇ ಖಾನ್ನಲ್ಲಿಯ ರ್ಯಾಪಿಡ್ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ ಅಪರಿಚಿತ ಮಹಿಳೆಯೋರ್ವಳ ಛಿದ್ರಗೊಂಡ ಅಂಗಾಂಗಗಳು ಪತ್ತೆಯಾಗಿವೆ.
ಶನಿವಾರ ಮಧ್ಯಾಹ್ನ ಮಾಹಿತಿಯ ಮೇರೆಗೆ ರ್ಯಾಪಿಡ್ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಧಾವಿಸಿದ ಪೊಲೀಸರು ಕೊಳೆಯತೊಡಗಿದ್ದ ಛಿದ್ರಗೊಂಡಿದ್ದ ಮಹಿಳೆಯ ಶರೀರದ ಭಾಗಗಳು,ತಲೆಗೂದಲ ಗೊಂಚಲು ಮತ್ತು ತಲೆಬುರುಡೆಯನ್ನು ಪತ್ತೆ ಹಚ್ಚಿ ಅವುಗಳನ್ನು ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಡಿಸಿಪಿ ರಾಜೇಶ ದೇವ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)