ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ಐಟಿ ದಾಳಿ
ಬೆಂಗಳೂರು, ಮಾ.20: ಆದಾಯ ತೆರಿಗೆ ವಂಚನೆ ಆರೋಪ ಸಂಬಂಧ ಶೋಭಾ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಇಲ್ಲಿನ ವೈಟ್‍ಫೀಲ್ಡ್ ರಸ್ತೆಯ ಹೂಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿಯ ಕಚೇರಿಗಳ ಮೇಲೆ ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳನ್ನೊಳಗೊಂಡ ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶೋಭಾ ಡೆವಲಪರ್ಸ್‍ಮುಖ್ಯ ಕಚೇರಿಯಲ್ಲಿ ಇಂದಿನ ಕೆಲಸಸಂಪೂರ್ಣಸ್ಥಗಿತಮಾಡಲಾಗಿದೆ. ಯಾವುದೇನೌಕರರನ್ನಹೊರಗೆ ಹೋಗದಂತೆ ಐಟಿ ಅಧಿಕಾರಿಗಳು ಸೂಚಿಸಿರುವುದು ವರದಿಯಾಗಿದೆ.
ಶೋಭಾ ಡೆವಲಪರ್ಸ್ ಮೇಲೆ ದಾಳಿ ವಿಚಾರ ಕುರಿತು ಮಾತನಾಡಿದ ಸುರ್ಜೇವಾಲಾ, ಐಟಿ ಇಲಾಖೆ ಬಿಜೆಪಿ ಚುನಾವಣಾ ವಿಭಾಗ ಆಗಿದೆ. ನಮ್ಮ ಮೇಲೆ ಸುಳ್ಳು ಸುಳ್ಳು ಆರೋಪ ಹೇರಲು ಇಂತಹ ದಾಳಿಗಳು ನಡೆಯುತ್ತಿವೆ ಎಂದು ಅವರು ಆಪಾದಿಸಿದರು.
Next Story