ಮುಂಬೈ ಇಂಡಿಯನ್ಸ್ಗೆ 126 ರನ್ ಗುರಿ ನೀಡಿದ ಆರ್ಸಿಬಿ
ನವಮುಂಬೈ, ಮಾ.21: ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 126 ರನ್ ಗುರಿ ನೀಡಿದೆ.
ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಅಮೆಲಿಯ ಕೆರ್ರ್(3-22)ನೇತೃತ್ವದ ಬೌಲಿಂಗ್ ದಾಳಿಗೆ ಆರ್ಸಿಬಿ ತತ್ತರವಾಯಿತು. ಆರ್ಸಿಬಿ ಪರ ಎಲ್ಲಿಸ್ ಪೆರ್ರಿ(29 ರನ್, 38 ಎಸೆತ), ರಿಚಾ ಘೋಷ್(29 ರನ್, 13 ಎಸೆತ)ಹಾಗೂ ನಾಯಕಿ ಸ್ಮತಿ ಮಂಧಾನ(24 ರನ್, 25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ನಾಟ್ ಸಿವೆರ್-ಬ್ರಂಟ್(2-24) ಹಾಗೂ ಇಸ್ಸಿ ವಾಂಗ್(2-26)ತಲಾ ಎರಡು ವಿಕೆಟ್ಗಳನ್ನು ಪಡೆದು ಆರ್ಸಿಬಿಯನ್ನು ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕಲು ನೆರವಾದರು.
Next Story