ದೇಶದ 406 ನಗರಗಳಲ್ಲಿ ಜಿಯೋ 5ಜಿ ಸೇವೆ ಆರಂಭ
ಹೊಸದಿಲ್ಲಿ, ಮಾ.21: ಭಾರತದಾದ್ಯಂತದ 406 ನಗರಗಳಲ್ಲಿ ತನ್ನ ನೈಜ 5ಜಿ ಸೇವೆಗಳ ಪ್ರಸಾರ ಲಭ್ಯವಿರುವುದಾಗಿ ರಿಲಯನ್ಸ್ ಜಿಯೋ ಮಂಗಳವಾರ ತಿಳಿಸಿದೆ.
16 ರಾಜ್ಯಗಳು/ ಕೇಂದ್ರಾಡಳಿತಗಳ 41 ನಗರಗಳಲ್ಲಿ ತನ್ನ 5 ಜಿ ಸೇವೆಗಳ ಆರಂಭವನ್ನು ರಿಲಯನ್ಸ್ ಜಿಯೋ ಅಧಿಕೃತವಾಗಿ ಘೋಷಿಸಿದೆ. ಆಂಧ್ರಪ್ರದೇಶದ ಆದೋನಿ, ಬಾದ್ವೆಲ್, ಚಿಲಕಲೂರಿಪೇಟೆ, ಗುಡಿವಾಡ, ಕಡಿರಿ, ನರಸಾಪುರ, ರಾಯಚೋಟಿ, ಶ್ರೀಕಾಳಹಸ್ತಿ, ತಡೆಪಲ್ಲಿಗುಡೆಂ ( ಆಂಧ್ರಪ್ರದೇಶ), ಮಡ್ಗಾಂವ್ (ಗೋವಾ), ಫತೇಹಬಾದ್ ಗೋಹನಾ, ಹನ್ಸಿ, ನರ್ನಾವುಲ್, ಪಲ್ವಾಲ್ (ಹರ್ಯಾ ಣ), ಪವೊಂಟಾ ಸಾಹೀಬ್ (ಹಿಮಾಚಲಪ್ರದೇಶ), ರಜೌರಿ (ಜಮ್ಮುಕಾಶ್ಮೀರ), ದುಮ್ಕಾ (ಜಾರ್ಖಂಡ್), ರಾಬರ್ಟಸನ್ ಪೇಟ್ (ಕರ್ನಾಟಕ) ಇವುಗಳಲ್ಲಿ ಸೇರಿವೆ.
ಕಾಂಞಂಗಾಡ್, ನೆಡುಮಂಗಾಡ್, ತಳಿಪ್ಪರಂಬ, ತಲಶ್ಯೇರಿ, ತಿರುವಲ್ಲಾ (ಕೇರಳ), ಬೇತೂಲು, ದೇವಸ್, ವಿದಿಶಾ (ಮಧ್ಯಪ್ರದೇಶ), ಭಂಡಾರಾ, ವಾರ್ಧಾ (ಮಹಾರಾಷ್ಟ್ರ), ಲುಂಗ್ಲಿಯಿ (ಮಿರೆರಾಂ), ಬ್ಯಾಸನಗರ, ರಾಯಗಡ(ಒಡಿಶಾ), ಹೋಶಿಯಾರ್ಪುರ (ಪಂಜಾಬ್), ಟೊಂಕ್ (ರಾಜಸ್ತಾನ), ಕಾರೈಕುಡಿ, ಕೃಷ್ಣಗಿರಿ, ರಾಣಿಪೇಟ್, ತೇನಿ ಅಲ್ಲಿನಗರಮ್, ಉದಕಮಂಡಲ, ವನಿಯಾಂಬಾಡಿ (ತಮಿಳುನಾಡು) ಹಾಗೂ ಕುಮಾರಘಾಟ್ (ತ್ರಿಪುರಾ) ನಗರಗಳಲ್ಲೂ 5 ಜಿ ಸೇವೆ ಆರಂಭಗೊಂಡಿದೆ.
‘‘ಜಿಯೋ ತನ್ನ ಟ್ರೂ-5ಜಿ ಸೇವೆಯನ್ನು ತ್ವರಿತವೇಗದಲ್ಲಿ ವಿಸ್ತರಿಸುತ್ತಿದೆ . ದೇಶದ ವಿಶಾಲವಾದ ಪ್ರದೇಶವನ್ನು ವ್ಯಾಪಿಸಲು ನಮಗೆ ಸಾಧ್ಯವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ’’ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಈ 41 ನಗರಗಳಲ್ಲಿ ಜಿಯೋ ಬಳಕೆದಾರರು 1 ಜಿಬಿಪಿಎಸ್ಪ್ಲಸ್ ವೇಗದ 5ಜಿ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸದೆ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಈ ವರ್ಷದ ಡಿಸೆಂಬರ್ ತಿಂಗಳೊಳಗೆ ದೇಶದ ಪ್ರತಿಯೊಂದು ಪಟ್ಟಣ, ತಾಲೂಕು ಹಾಗೂ ತಹಶೀಲಿನಲ್ಲಿ 5 ಜಿ ಸೇವೆಯನ್ನು ಒದಗಿಸುವ ತನ್ನ ಘೋಷಿತ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಜಿಯೋ ಸಾಗುತ್ತಿದೆ ಎಂದವರು ಹೇಳಿದರು.