ಖಬರಸ್ಥಾನಕ್ಕೆ ಜಮೀನು: ಮಾಹಿತಿಗೆ ಸೂಚನೆ
ಉಡುಪಿ, ಮಾ.23: ತಮ್ಮ ವ್ಯಾಪ್ತಿಯಲ್ಲಿ ಖಬರಸ್ಥಾನಕ್ಕಾಗಿ ಜಮೀನು ಅವಶ್ಯಕತೆ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಮಾ.31ರೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಸರಕಾರ ಆದೇಶ ಹೊರಡಿಸಿದೆ.
ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳಿಗೆ ಖಬರಸ್ಥಾನದ ಅವಶ್ಯಕತೆ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಿಲ್ಲಾ ವಕ್ಫ್ ಕಚೇರಿ, ಆಝಾದ್ ಭವನ, ಮಣಿಪಾಲ ಇಲ್ಲಿಗೆ ಸಲ್ಲಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ.ಹೆಚ್.ಅಬ್ದುಲ್ ಮುತ್ತಾಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿ.ಹೆಚ್.ಅಬ್ದುಲ್ ಮುತ್ತಾಲಿ, ಅಧ್ಯಕ್ಷರು, ಜಿಲ್ಲಾ ವಕ್ಫ್ ಸಲಹಾ ಸಮಿತಿ, ಉಡುಪಿ ಜಿಲ್ಲೆ (ದೂರವಾಣಿ ಸಂಖ್ಯೆ: 9901182296) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
Next Story