ನರಿಂಗಾನ: ಹೊನಲು ಬೆಳಕಿನ ಕಂಬಳ ಉದ್ಘಾಟನೆ
ಕೊಣಾಜೆ: ಉಳ್ಳಾಲ ತಾಲೂಕಿನಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಏರ್ಪಡಿಸಲಾಗಿರುವ ಹೊನಲು ಬೆಳಕಿನ ಲವಕುಶ ಜೋಡುಕರೆ 'ನರಿಂಗಾನ ಕಂಬಳ'ವು ಧಾರ್ಮಿಕ ವಿಧಿಗಳೊಂದಿಗೆ ಶನಿವಾರ ಉದ್ಘಾಟನೆಗೊಂಡಿತು.
ಕಂಬಳ ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ಶ್ರೀ ತಿಮ್ಮಪ್ಪ ಕೊಂಡೆಯಾನೆ ಮಂಜು ಭಂಡಾರಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುನಾಡಿನ ಜಾನಪದ ಕ್ರೀಡೆಯು ನಮ್ಮ ನಾಡಿಯ ಸಂಸ್ಕೃತಿಯ ಪ್ರತೀಕ. ಯುವ ಸಮುದಾಯ ಇದರ ಮಹತ್ವವನ್ನು ಅರಿಯಬೇಕು. ಉಳ್ಳಾಲ ತಾಲೂಕಿನ ನರಿಂಗಾನದಲ್ಲಿ ಆರಂಭಗೊಂಡಿರುವ ಈ ಕಂಬಳ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ, ಕಂಬಳ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳಿದ್ದಂತೆ. ನಮ್ಮ ಕರಾವಳಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಈ ಭಾಗದ ಎಲ್ಲಾ ಧರ್ಮದ,ಜಾತಿಯ ಜನರ ಸಹಕಾರದೊಂದಿಗೆ ಸೌಹಾರ್ದತೆಯಿಂದ ಈ ಕಂಬಳವನ್ನು ನಡೆಸಲಾಗುತ್ತಿದೆ ಎಂದರು.
ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಂಬಳ ಸಮಿತಿ ಅಧ್ಯಕ್ಷರಾದ ವೆಂಕಪ್ಪ ಕಾಜವ ಮಿತ್ತಕೋಡಿ, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ಪ್ರಧಾನ ತಂತ್ರಿಗಳಾದ ವೇದಮೂರ್ತಿ ವರ್ಕಾಡಿ ರಾಜೇಶ್ ತಾಳಿತ್ತಾಯ, ತಲಪಾಡಿ ಕ್ಷೇತ್ರದ ಅರ್ಚಕರಾದ ಪಂಜಾಲ ಗಣೇಶ್ ಭಟ್, ಧಾರ್ಮಿಕ ಮುಖಂಡರುಗಳಾದ ಗುಣಕರ ಆಳ್ವ ಯಾನೆ ರಾಮ ರೈ ಬೋಳಿಯಾರ್, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷರಾಗಿರುವಂತಹ ಎರ್ಮಾಳು ರೋಹಿತ್ ಹೆಗ್ಡೆ, ಹಾಗೆ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಘವೇಂದ್ರ ಆಚಾರ್ಯ, ಪಣಂಬೂರು ಇಡ್ಯ ಶ್ರೀ ಧೂಮಾವತಿ ದೇವಸ್ಥಾನದ ಗಡಿ ಪ್ರಧಾನ ರದಂತಹ ಪ್ರಭಾಕರ್ ರೈ ಯಾನೆ ಅಣ್ಣಪ್ಪ ಅರುವಾಲ್, ನೆತ್ತಿಲ ಬಾಳಿಕೆ ಗಡಿಪ್ರದಾನರಾಗಿರುವ ಶ್ರೀ ಮೋಹನ್ ದಾಸ್ ಭಂಡಾರಿ, ಸ್ಥಳೀಯ ಸಂತ ಲಾರೆನ್ಸರ ದೇವಾಲಯದ ಧರ್ಮ ಗುರುಗಳಾಗಿರುವಂತಹ ರೆ. ಫಾ. ಪೆಡ್ರಿಕ್ ಕೊರೆಯಾ, ರಘುರಾಮ ಶೆಟ್ಟಿ, ತೀರ್ಪುಗಾರರಾದ ಗುಣಪಾಲ ಕಡಂಬ, ಕಮ್ಮಾಜೆ ಮಹಾಬಲ ಆಳ್ವ, ತಲಪಾಡಿ ದೊಡ್ಡಮನೆಯ ರವೀಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ ಪುಳಿಂಚಮಜಲು, ಅಶೋಕ ಪಕ್ಕಳ, ಉಮೇಶ್ ಶೆಟ್ಟಿ, ಮಾರಪ್ಪ ಭಂಡಾರಿ, ಶೋಭಿತ್ ಪೂಂಜಾ, ಕುರ್ನಾಡು ಪಂಚಾಯತಿ ಅಧ್ಯಕ್ಷರಾದ ಗಣೇಶ್ ನಾಯ್ಕ್, ಕೆಳಗಿನ ಕೊಟೆಕಾರು ಗುತ್ತು ಕೃಷ್ಣ ಶೆಟ್ಟಿ, ಅತ್ತಾವುಲ್ಲಾ, ನಾರಾಯಣ ರೈ, ನಾರಾಯಣ ನಾಯ್ಕ್, ಜಬ್ಬಾರ್ ಬೋಳಿಯಾರ್, ಮಹಮ್ಮದ್ ಮೋನು, ಡಾ.ನಾಗೇಶ್, ಸಚ್ಷಿದಾನಂದ ಶೆಟ್ಟಿ, ಪದ್ಮನಾಭ ನರಿಂಗಾನ, ಪ್ರಸಾದ್ ರೈ ಕಲ್ಲಿಮಾರ್ , ಮಹಮ್ಮದ್ ಪಾರೆ, ಬಂಟ್ವಾಳ ತಾಲೂಕು ಪಂಚಾಯಿತಿಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ ಮೋರ್ಲಗುತ್ತು, ಕರುಣಾಕರ ಶೆಟ್ಟಿ ಮೋರ್ಲ, ಮ್ಯಾಕ್ಸಿಯಮ್ ಡಿಸೋಜ, ಮಹಿಳಾ ವಿಭಾಗ ಅದ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ , ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ , ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎ.ಸಿ.ಭಂಡಾರಿ, ಕೋಶಾಧಿಕಾರಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜೊತೆ ಕಾರ್ಯದರ್ಶಿಗಳಾದ ಪ್ರೇಮಾನಂದ ರೈ ನೆತ್ತಿಲಕೋಡಿ, ವೈಭವ್ ಶೆಟ್ಟಿ ತಲಪಾಡಿ, ಸಂಚಾಲಕ ನಾಸಿರ್ ನಡುಪದವು, ಮುರಳೀಧರ ಶೆಟ್ಟಿ ಮೋರ್ಲ, ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಪಾರೆ, ಸಹ ಸಂಚಾಲಕರಾದ ಜೋಸೆಫ್ ಕುಟಿನ್ಹ , ವಿನಯ್ (ವಿನು) ಶೆಟ್ಟಿ ನಾರ್ಲ ತಲಪಾಡಿ ಹಾಗೂ ಅಜೀಝ್ ಆರ್ ಕೆ ಸಿ ಹಾಗೂ ಸುಂದರ ಪೂಜಾರಿ ಕೋಡಿಮಜಲು ಮೋರ್ಲ ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿದರು. ಸತೀಶ್ ಕುಮಾರ್ ಪುಂಡಿಕಾಯಿ, ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.