ಪಡುಬಿದ್ರೆ: ಟ್ಯಾಂಕರ್ ಢಿಕ್ಕಿ; ಬೈಕ್ ಸವಾರರಿಬ್ಬರು ಮೃತ್ಯು
ಪಡುಬಿದ್ರೆ: ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಫಲಿಮಾರು ಅವರಾಲುಮಟ್ಟುವಿನ ಅಡ್ಕ ಸುಬ್ರಹ್ಮಣ್ಯ (30) ಮತ್ತು ಗಿರೀಶ್ (26) ಎಂದು ಗುರುತಿಸಲಾಗಿದೆ.
ಮೂಳೂರಿನ ನರ್ಸರಿ ಬಳಿ ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದು ಅದರ ಚಕ್ರಕ್ಕೆ ಸಿಲುಕಿದ್ದರು. ಸುಬ್ರಹ್ಮಣ್ಯ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಗಿರೀಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಉಡುಪಿ ಕಡೆಯಿಂದ ಪಡುಬಿದ್ರೆ ಕಡೆಗೆ ಇವರಿಬ್ಬರು ಸಂಚರಿಸುತ್ತಿದ್ದು, ಇದೇ ವೇಳೆ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story