ಕ್ರೀಡೆ
ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ನಿಖಾತ್ ಝರೀನ್, ಲೊವ್ಲಿನಾ

Photo:twitter
ಹೊಸದಿಲ್ಲಿ: ಭಾರತದ ಸ್ಟಾರ್ ಬಾಕ್ಸರ್‌ಗಳಾದ ನಿಖಾತ್ ಝರೀನ್ ಮತ್ತು ಲೊವ್ಲಿನಾ ಬೊರ್ಗೊಹೇನ್ ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಭಾರತದ ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ (ಎಚ್‌ಪಿಡಿ) ಬರ್ನಾರ್ಡ್ ಡ್ಯೂನ್ ಶನಿವಾರ ದೃಢಪಡಿಸಿದ್ದಾರೆ. ಏಷ್ಯನ್ ಗೇಮ್ಸ್ 2024ರ ಪ್ಯಾರೀಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಸುತ್ತು ಕೂಡಾ ಆಗಿರುತ್ತದೆ.
ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಂಗ್ಸೋವ್ ನಗರದಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡುವ ಸಂಬಂಧ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ನೀತಿಯ ಅನ್ವಯ, "ವಿಶ್ವಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ/ ಬೆಳ್ಳಿ ಪದಕ ಗೆದ್ದವರು ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ನೇರವಾಗಿ ಆಯ್ಕೆಯಾಗುತ್ತಾರೆ"
ಅಂದರೆ ಲೈಟ್‌ಫ್ಲೈವೈಟ್ ವಿಭಾಗದಲ್ಲಿ ನಿಖತ್ (50 ಕೆಜಿ) ಮತ್ತು ಮಿಡ್ಲ್‌ವೈಟ್ ವಿಭಾಗದಲ್ಲಿ ಲೊವಿನಾ (75 ಕೆಜಿ) ಈಗಾಗಲೇ ವಿಶ್ವಚಾಂಪಿಯನ್‌ಶಿಪ್ ಫೈನಲ್ ತಲುಪಿದ್ದು, ಈ ಕೂಟಕ್ಕೆ ಅರ್ಹತೆ ಸಂಪಾದಿಸಿದ್ದಾರೆ. ಇಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದವರು ಸಹಜವಾಗಿಯೇ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗುತ್ತಾರೆ ಎಂದು ಡ್ಯೂನ್ ಸ್ಪಷ್ಟಪಡಿಸಿದರು.
ಏಷ್ಯನ್ ಗೇಮ್ಸ್‌ನಲ್ಲಿ 51, 57, 60, 69 ಹಾಗೂ 75 ಕೆಜಿ ಹೀಗೆ ಐದು ವಿಭಾಗಗಳಲ್ಲಿ ಭಾರತೀಯ ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈ ಐದು ವರ್ಗಗಳ ಜತೆಗೆ 66 ಕೆಜಿ ವಿಭಾಗವೂ ಇರುತ್ತದೆ.
ಅಂದರೆ ಕನಿಷ್ಠ ತೂಕ (48 ಕೆ.ಜಿ) ವಿಭಾಗದ ವಿಶ್ವಚಾಂಪಿಯನ್ ನೀತು ಘಾಂಘಾಸ್ ಮತ್ತು ಈಗಾಗಲೇ ಫೈನಲ್ ತಲುಪಿರುವ ಸವೀಟಿ ಬೋರಾ (81 ಕೆಜಿ) ಸ್ಟ್ಯಾಂಡ್‌ಬೈ ಬಾಕ್ಸರ್‌ಗಳಾಗಿರುತ್ತಾರೆ. ಅವರು ಒಲಿಂಪಿಕ್ ತೂಕ ವರ್ಗಕ್ಕೆ ಬದಲಾಗುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ತಮ್ಮ ತೂಕ ವರ್ಗ ಬದಲಿಸಿಕೊಳ್ಳುವವರು ಎರಡನೇ ಹಾಗೂ ಮೂರನೇ ಸ್ಥಾನದಲ್ಲಿರುತ್ತಾರೆ. ಅರ್ಹತೆ ಪಡೆದ ಬಾಕ್ಸರ್‌ಗಳಿಗೆ ಏನಾದರೂ ಆದಲ್ಲಿ, ಉಳಿದವರನ್ನು ಪರಿಗಣಿಸಲಾಗುತ್ತದೆ ಎಂದು ಡ್ಯೂನ್ ಸ್ಪಷ್ಟಪಡಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ