varthabharthi


ರಾಷ್ಟ್ರೀಯ

ಗುಜರಾತ್ ಹತ್ಯಾಕಾಂಡದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ: ಮಹಾರಾಷ್ಟ್ರ ವಿಧಾನ ಸಭೆಯಿಂದ ನಿರ್ಣಯ ಅಂಗೀಕಾರ

ವಾರ್ತಾ ಭಾರತಿ : 26 Mar, 2023

ಸಾಂದರ್ಭಿಕ ಚಿತ್ರ (PTI

ಗಾಂಧಿನಗರ, ಮಾ. 26: ಗುಜರಾತ್ ಹತ್ಯಾಕಾಂಡದ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿ ಮಹಾರಾಷ್ಟ್ರ ವಿಧಾನ ಸಭೆ ಶನಿವಾರ ನಿರ್ಣಯ ಅಂಗೀಕರಿಸಿದೆ.

ಬಿಬಿಸಿ ಸಾಕ್ಷ್ಯಚಿತ್ರ ದೇಶದ ನ್ಯಾಯಾಂಗ ವ್ಯವಸ್ಥೆಯ ವರ್ಚಸ್ಸಿಗೆ ಧಕ್ಕೆ   ಹಾಗೂ ಧಾರ್ಮಿಕ ವಿಭಜನೆ ಉಂಟು ಮಾಡಿದೆ ಎಂದು ನಿರ್ಣಯ  ಹೇಳಿದೆ. 
ಅಸ್ಸಾಂ, ಗುಜರಾತ್ ಹಾಗೂ ಮಧ್ಯಪ್ರದೇಶದ ಬಳಿಕ ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ನಿರ್ಣಯ ಅಂಗೀಕರಿಸುತ್ತಿರುವ ನಾಲ್ಕನೇ ರಾಜ್ಯ ಮಹಾರಾಷ್ಟ್ರ. 
ಬಿಜೆಪಿಯ ಅತುಲ್ ಭಟ್ಖಾಲ್ಕರ್ ಅವರು ವಿಧಾನ ಸಭೆಯಲ್ಲಿ ನಿರ್ಣಯ ಮಂಡಿಸಿದರು ಅದನ್ನು ಸ್ಪೀಕರ್ ರಾಹುಲ್ ನರ್ವೇಕರ್ ಮತಕ್ಕೆ ಹಾಕಿದರು. 
ಅನಂತರ ಸದನ ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯ ಅಂಗೀಕರಿಸುವ ಸಂದರ್ಭ ಪ್ರತಿಪಕ್ಷಗಳು ಸದನದಲ್ಲಿ ಇರಲಿಲ್ಲ.89

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)