ಭಾರೀ ಗಾಳಿಯ ಮುನ್ಸೂಚನೆ: ಮಲ್ಪೆ ತೇಲುವ ಸೇತುವೆ ತೆರವು
ಮಲ್ಪೆ, ಮಾ.27: ನಿರ್ವಹಣೆಯ ಉದ್ದೇಶ ಹಾಗೂ ಮುಂದಿನ ಐದು ದಿನದವರೆಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆಯನ್ನು ಹಾವಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿರುವ ತೇಲುವ ಸೇತುವೆ ಯನ್ನು ತೆರವುಗೊಳಿಸಲಾಗಿದೆ ಎಂದು ಮಂತ್ರಾ ಟೂರಿಸಂ ಪ್ರಕಟಣೆಯಲ್ಲಿ ತಿಳಿಸಿದೆ.
ತೇಲುವ ಸೇತುವೆಯನ್ನು ಎರಡು ತಿಂಗಳಿಗೊಮ್ಮೆ ನಿರ್ವಹಣೆ ಮಾಡಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಸೇರಿಕೊಂಡಿರುವ ಚಿಪ್ಪುಗಳನ್ನು ತೆರವುಗೊಳಿಸಬೇಕಾಗಿದೆ. ಆದರೆ ಕೆಲವರು ಮಲ್ಪೆ ಬೀಚಿನ ಅಭಿವೃದ್ಧಿಯನ್ನು ಸಹಿಸಲಾಗದೆ ತೇಲುವ ಸೇತುವೆ ಮತ್ತೆ ಮುರಿದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸೇತುವೆಯ ತಳಭಾಗದಲ್ಲಿ ಚಿಪ್ಪುಗಳು ಬೆಳೆದಿದ್ದು, ಆ ಚಿಪ್ಪುಗಳನ್ನು ತೆಗೆಯಲು ಸೇತುವೆಯನ್ನು ತೆರವುಗೊಳಿಸಲಾಗಿದೆ. ಅದು ಬಿಟ್ಟು ಸೇತುವೆ ಎಲ್ಲೂ ಮುರಿದು ಹೋಗಿಲ್ಲ ಎಂದು ಮಂತ್ರಾ ಟೂರಿಸಂ ಸ್ಪಷ್ಟಪಡಿಸಿದೆ.
Next Story