ಮಾ.28ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರಿಂದ ಪ್ರತಿಭಟನೆ
ಉಡುಪಿ, ಮಾ.27: ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುವ ಬೀಡಿ ಕಾರ್ಮಿಕರ ಹೋರಾಟದ ಭಾಗವಾಗಿ ನಾಳೆ ಮಾ.28ರಂದು ಬೆಳಗ್ಗೆ 11ಗಂಟೆಗೆ ಬೀಡಿ ಕಾರ್ಮಿಕರ 14 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.
ಬಳಿಕ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಲಾಗುವುದು. ಬೇಡಿಕೆಗಳು: ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿ 1000 ಬೀಡಿಗೆ 395 ರೂ. ನೀಡಬೇಕು. ತುಟ್ಟಿಭತ್ಯೆ ಅಂಕ ಒಂದಕ್ಕೆ 5 ಪೈಸೆಯಂತೆ ನೀಡಬೇಉ. ಬೀಡಿ ಕಾರ್ಮಿಕರಿಗೆ ತಿಂಗಳಿಗೆ 6000 ರೂ. ಪಿಂಚಣಿ ನೀಡಬೇಕು. ಜಿಲ್ಲೆಯ ಎಲ್ಲಾ ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟನೆ ಪ್ರಕಟಣೆ ಯಲ್ಲಿ ತಿಳಿಸಿದೆ.
Next Story