varthabharthi


ಅಂತಾರಾಷ್ಟ್ರೀಯ

ಭಾರತ-ಲಂಕಾ ನಡುವೆ ಎಪ್ರಿಲ್ ನಲ್ಲಿ ಪ್ರಯಾಣಿಕರ ದೋಣಿ ಸೇವೆ ಆರಂಭ

ವಾರ್ತಾ ಭಾರತಿ : 27 Mar, 2023

ಕೊಲಂಬೊ, ಮಾ.27: ಶ್ರೀಲಂಕಾ ಮತ್ತು ಭಾರತ ನಡುವಿನ ಪ್ರಯಾಣಿಕರ ದೋಣಿ ಸೇವೆ ಎಪ್ರಿಲ್ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಸಚಿವ ನಿರ್ಮಲ್ ಸಿರಿಪಾಲ ಡಿಸಿಲ್ವಾ ರವಿವಾರ ಹೇಳಿದ್ದಾರೆ.

ಎಪ್ರಿಲ್ 29ರಂದು ಕಾರೈಕಲ್ ಮತ್ತು ಜಾಫ್ನಾ ಜಿಲ್ಲೆಯ ಕಂಕೇಸಂಥುರೈ ಬಂದರಿನ ನಡುವೆ ಪ್ರಯಾಣಿಕರ ದೋಣಿ ಸೇವೆ ಆರಂಭವಾಗಲಿದೆ. ಪ್ರತೀ ಪ್ರಯಾಣಿಕರಿಗೂ ಅತ್ಯಂತ ರಿಯಾಯಿತಿ ದರದಲ್ಲಿ 100 ಕಿ.ಗ್ರಾಂನಷ್ಟು ಸರಕುಗಳನ್ನು ಸಾಗಿಸಲು ಅವಕಾಶವಿದೆ. 

ಅಲ್ಲದೆ ಎರಡೂ ದೇಶಗಳಲ್ಲಿನ ಪ್ರಯಾಣಿಕರ ದೋಣಿ ಸೇವೆ ನಿರ್ವಾಹಕರಿಗೆ ಈ ಅವಕಾಶ ಮುಕ್ತವಾಗಿದೆ. ಕಂಕೇಸನ್ಥುರೈಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ನಿರ್ಮಿಸಲಾಗಿದ್ದು ಇದು 4 ಗಂಟೆಗಳ ಅವಧಿಯ ಪ್ರಯಾಣವಾಗಿರಲಿದೆ ಎಂದು ಸಚಿವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)