varthabharthi


ರಾಷ್ಟ್ರೀಯ

ಸುಷ್ಮಾ ಸ್ವರಾಜ್ ಪುತ್ರಿ ರಾಜಕೀಯ ಪ್ರವೇಶ

ವಾರ್ತಾ ಭಾರತಿ : 27 Mar, 2023

ಬಾನ್ಸುರಿ ಸ್ವರಾಜ್ | Photo: Twitter/Bansuri Swaraj

ಹೊಸದಿಲ್ಲಿ, ಮಾ. 27: ಬಿಜೆಪಿಯ ದಿಲ್ಲಿ ಘಟಕದ ಕಾನೂನು ಕೋಶದ ಸಹ ಸಂಚಾಲಕಿಯಾಗಿ ರವಿವಾರ ನಿಯೋಜಿತರಾಗುವ ಮೂಲಕ ವಿದೇಶಾಂಗ ವ್ಯವಹಾರಗಳ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಜಕೀಯ ಪ್ರವೇಶಿಸಿದ್ದಾರೆ.

ಈ ಸಂದರ್ಭ ಬಾನ್ಸುರಿ ಅವರಿಗೆ ಅಭಿನಂದನೆ ಸಲ್ಲಿಸಿದ ಪಕ್ಷದ ಅಧ್ಯಕ್ಷ ವಿರೇಂದ್ರ ಸಚ್‌ದೇವ್, ಬಾನ್ಸುರಿ ಸ್ವರಾಜ್ ಅವರ ನಿಯೋಜನೆ ಈಗಿನಿಂದಲೇ ಜಾರಿಗೆ ಬರಲಿದೆ ಎಂದರು. ಅವರು ಬಿಜೆಪಿಗೆ ನೆರವು ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಬಾನ್ಸುರಿ ಸ್ವರಾಜ್ ಅವರು ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ‘‘ನಾನು ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ್, ವಿರೇಂದ್ರ ಸಚ್‌ದೇವ್, ದಿಲ್ಲಿ ಬಿಜೆಪಿ ಹಾಗೂ ಬಿಜೆಪಿಗೆ  ಈ ಅವಕಾಶ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’’ ಎಂದು ಅವರು ಬರೆದುಕೊಂಡಿದ್ದಾರೆ.

15 ವರ್ಷಕ್ಕೂ ಅಧಿಕ ಕಾನೂನಿನ ಕುರಿತು ಅನುಭವ ಹೊಂದಿರುವ ಬಾನ್ಸುರಿ ಸ್ವರಾಜ್ ಅವರು ಪ್ರಸಕ್ತ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)