ಬೆಂಗಳೂರು
ಬೆಂಗಳೂರು | ಅಶ್ಲೀಲ ವೆಬ್‌ಸೈಟ್‌ಗೆ ಫೋಟೋ ಅಪ್ಲೋಡ್ ಮಾಡುವ ಬೆದರಿಕೆ: ನಡುರಸ್ತೆಯಲ್ಲೇ ಮಹಿಳೆಯರಿಬ್ಬರ ಮಾರಾಮಾರಿ

ಬೆಂಗಳೂರು, ಮಾ.27: ಯುವತಿಯ ಫೋಟೋಗಳನ್ನು ವೆಬ್‍ಸೈಟ್‍ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲೇ ಮಹಿಳೆಯರಿಬ್ಬರ ಮಧ್ಯೆ ನಡೆದ ಜೋರು ಗಲಾಟೆ ಹೊಡೆದಾಟ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುನಂದಾ ಹಾಗೂ ರೇಷ್ಮಾ ಎಂಬುವರ ನಡುವೆ ಗಲಾಟೆ ನಡೆದಿದ್ದು, ರೇಷ್ಮಾ ಮಗಳ ಫೋಟೋಗಳನ್ನು ಸುನಂದಾ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಬಳಿಕ ಅದನ್ನು ಆಶ್ಲೀಲ ವೆಬ್‍ಸೈಟ್‍ಗೆ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾಳೆನ್ನಲಾಗಿದೆ.
ಅಷ್ಟೇ ಅಲ್ಲದೇ ರೌಡಿಗಳನ್ನು ಕಳುಹಿಸಿ ರೇಷ್ಮಾ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಪ್ರಶ್ನೆ ಮಾಡಲು ಹೋದ ವೇಳೆ ಅಶ್ಲೀಲ ಪದಗಳಿಂದ ರೇಷ್ಮಾಳನ್ನು ನಿಂದಿಸಿದ್ದಾಳೆ. ಬಳಿಕ ಸಾರ್ವಜನಿಕವಾಗಿ ರೇಷ್ಮಾ ಮೇಲೆ ಸುನಂದಾ ಹಲ್ಲೆ ನಡೆಸಿದ್ದು, ಘಟನಾವಳಿಯ ದೃಶ್ಯಾವಳಿಗಳ ಸಮೇತ ರೇಷ್ಮಾ ಯಶವಂತಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ