ಮಾ.30: ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ 4ನೇ ಮಳಿಗೆ ವಾಮಂಜೂರಿನಲ್ಲಿ ಶುಭಾರಂಭ
ಮಂಗಳೂರು, ಮಾ.28: ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ನ 4ನೇ ಮಳಿಗೆಯು ನಗರ ಹೊರವಲಯದ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆಯ ರಿಬ್ಕೊ ಕಾಂಪ್ಲೆಕ್ಸ್ನಲ್ಲಿ ಮಾ.30ರಂದು ಶುಭಾರಂಭಗೊಳ್ಳಲಿದೆ ಎಂದು ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ನ ಮಳಿಗೆಯು ನಗರದ ಯೆಯ್ಯಾಡಿ ಮತ್ತು ತೊಕ್ಕೊಟ್ಟು ಸಮೀಪದ ಕಲ್ಲಾಪು ಹಾಗೂ ಲೇಡಿಹಿಲ್ನಲ್ಲಿ ವಿ.ಕೆ.ಲಿಂಗ್ ಕಾನ್ಸೆಪ್ಟ್ನಲ್ಲಿ ಜನಪ್ರಿಯವಾಗಿದೆ. ಶುಭಾರಂಭದ ಪ್ರಯುಕ್ತ ಮಾ.30ರಿಂದ ಎಪ್ರಿಲ್ 30ರವರೆಗೆ ಸಿಟ್, ಡ್ರೊಪ್, ವಿನ್ ಕೂಪನ್ ಯೋಜನೆ ಹಮ್ಮ್ಮಿಕೊಳ್ಳಲಾಗಿದೆ. .50,000 ರೂ, 30,000 ರೂ, 15,000 ರೂ. ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಸೋಫಾ ಮತ್ತು ಫರ್ನಿಚರ್ ತಯಾರಿಕೆಯಲ್ಲಿ ಪ್ರಸಿದ್ಧವಾದ ಬ್ರಾಂಡ್ ವಿ.ಕೆ. ಫರ್ನಿಚರ್ ಹೆಸರು ಮನೆಮಾತಾಗಿದ್ದು, ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್ರೂಂ ಸೆಟ್ಸ್, ವಾರ್ಡ್ ರೋಬ್ಸ್, ಬೆಡ್ಸ್, ಡೈನಿಂಗ್ ಸೆಟ್ಸ್, ಲಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್ಸ್, ಮೊಡ್ಯುಲರ್ ಕಿಚನ್, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಸೋಫಾ ಸೆಟ್ ಮುಂತಾದುವುಗಳ ತಯಾರಿಕೆ ಮತ್ತು ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ಹೆಸರುವಾಸಿಯಾಗಿದೆ.
ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ. ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್ವುಡ್ ಬೆಡ್ರೂಂ ಸೆಟ್ ಮತ್ತು ಫರ್ನಿಚರ್, ಎಕ್ಸ್ಕ್ಲೂಸಿವ್ ಡ್ಯುರೋಫ್ಲೆಕ್ಸ್ ಮ್ಯಾಟ್ರೆಸ್ ಮಳಿಗೆಯೂ ಇದಾಗಿದ್ದು ರಿಪೋಸ್ ಮತ್ತು ಇನ್ನಿತರ ಮ್ಯಾಟ್ರೆಸ್ಗಳು ಕೂಡಾ ಲಭ್ಯವಿವೆ.
ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ಸ್, ಲ್ಯಾಪ್ಟಾಪ್ಸ್, ಕಿಚನ್ವೇರ್ಸ್, ಕ್ರೊಕರೀಸ್, ಗೃಹಾಲಂಕಾರ ಸಾಮಾಗ್ರಿಗಳು ಹೀಗೆ ಇನ್ನೂ ಹಲವು ಮನೆ, ಕಚೇರಿ, ಸ್ಕೂಲ್-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳಿಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿ ಮತ್ತು ಆಯ್ಕೆಗೆ ಉತ್ತಮ ಅವಕಾಶಗಳಿವೆ.
ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಎಚ್ಡಿಬಿ ಮತ್ತು ಐಡಿಎಫ್ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಸ್ಯಾಮ್ಸಂಗ್, ಎಲ್ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್ಪೂಲ್, ಬಾಷ್, ಐಎಫ್ಬಿ, ಗೋದ್ರೆಜ್, ಓ ಜನ್ರಲ್, ಲಾಯ್ಡ್, ಹ್ಯಾವೆಲ್ಸ್, ಡೈಕಿನ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎ.ಸಿ., ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ನಿ ಮತ್ತು ಹಾಬ್ಸ್, ಕೂಲರ್, ಫ್ಯಾನ್ಸ್, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಮತ್ತು ಡೆಕೊರೇಟಿವ್ ಗೃಹಪಯೋಗಿ ಸಾಮಗ್ರಿಗಳು, ಸ್ಯಾಮ್ಸಂಗ್, ನೋಕಿಯಾ, ವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್ಗಳು, ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ಇಲ್ಲಿ ದೊರೆಯಲಿದೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್, ಇಂಟೀರಿಯರ್ ಮತ್ತು ಕಸ್ಟಮೈಸ್ಡ್ ಸೋಫಾಗಳನ್ನು ತಯಾರಿಸಿ ಕೊಡಲಾಗುವುದು. ಶೋರೂಮ್ಗಳು ವಿಶಾಲವಾಗಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶವಿದೆ. ನಗರ ವ್ಯಾಪ್ತಿಯಲ್ಲಿ ಉಚಿತ ಸಾಗಾಟದ ಸೌಲಭ್ಯವೂ ಇದೆ. ಮಳಿಗೆಯು ರವಿವಾರವೂ ತೆರೆದಿರುತ್ತವೆ ಎಂದು ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.