ಮುಸ್ಲಿಮರ ಮಾಂಸದಂಗಡಿಗಳನ್ನು ಬಿಜೆಪಿ ನಾಯಕ ಮುಚ್ಚಿಸುತ್ತಿರುವ ವೀಡಿಯೋ ವೈರಲ್
ಸಾಮಾಜಿಕ ತಾಣದಾದ್ಯಂತ ಆಕ್ರೋಶ
ಹೊಸದಿಲ್ಲಿ: ದಿಲ್ಲಿಯ ಬಿಜೆಪಿ ನಾಯಕ ರವೀಂದ್ರ ಸಿಂಗ್ ಅವರು ನವರಾತ್ರಿ ದಿನದಂದು ಮುಸ್ಲಿಂ ಪ್ರದೇಶದಲ್ಲಿ ಕೋಳಿ ಅಂಗಡಿಗಳನ್ನು ಮುಚ್ಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯ ರಾಷ್ಟ್ರ ರಾಜಧಾನಿಯ ವಿನೋದ್ ನಗರ ಪಶ್ಚಿಮದಲ್ಲಿರುವ ಮಂಡವಾಲಿ ಫಜಲ್‌ಪುರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನವರಾತ್ರಿಯ ಸಮಯದಲ್ಲಿ ಎಲ್ಲಾ ಕೋಳಿ ಮತ್ತು ಮಾಂಸದ ಅಂಗಡಿಗಳ ಮಾಲೀಕರಿಗೆ ತಮ್ಮ ವ್ಯಾಪಾರವನ್ನು ಮುಚ್ಚುವಂತೆ ಬಲವಂತಪಡಿಸುತ್ತಾ ಬಿಜೆಪಿ ನಾಯಕ ತನ್ನ ಬೆಂಬಲಿಗರ ಗುಂಪಿನೊಂದಿಗೆ ಬೀದಿಗಳಲ್ಲಿ ನಡೆಯುವುದನ್ನು ಕಾಣಬಹುದು.
"ಇದು ನವರಾತ್ರಿ ಸಮಯ ಮತ್ತು ನಾವು ಅಂಗಡಿ ಮಾಲೀಕರಿಗೆ ಅವರ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದೇವೆ" ಎಂದು ಸಿಂಗ್ ಹೇಳುವುದನ್ನು ವೀಡಿಯೊದಲ್ಲಿ ಕೇಳುತ್ತದೆ.
"ನವರಾತ್ರಿ ಹೊರತುಪಡಿಸಿ ವರ್ಷಪೂರ್ತಿ ನಿಮ್ಮ ವ್ಯಾಪಾರವನ್ನು ಮಾಡಬಹುದು" ಎಂದು ಅವರು ಹೇಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಈ ಕುರಿತು ಸಾಮಾಜಿಕ ತಾಣದಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Chicken shops in the Muslim locality of Mandawali Fazalpur in Vinod Nagar West, Delhi, have been shut down by BJP leader Ravindra Singh in honour of Navratri. pic.twitter.com/OZcIj5cfRj
— Meer Faisal (@meerfaisal01) March 28, 2023