'ಪ್ರಜಾಧ್ವನಿ' ಯಾತ್ರೆ ವೇಳೆ ಕಲಾವಿದರತ್ತ ನೋಟು ಎಸೆದ ಡಿಕೆಶಿ: ವಿಡಿಯೋ ವೈರಲ್
ಬೆಂಗಳೂರು: ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಲಾವಿದರಿಗೆ 500 ರೂ. ನೋಟುಗಳನ್ನು ಎಸೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿಯಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ಕಲಾವಿದರಿಗೆ ಪ್ರಜಾಧ್ವನಿ ಬಸ್ಸಿನ ಮೇಲಿನಿಂದ 500 ರೂ ನೋಟುಗಳನ್ನು ಎಸೆಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಡಿಕೆ ಶಿವಕುಮಾರ್ ಅವರ ಈ ವರ್ತನೆ ಬಗ್ಗೆ ಪರ-ವಿರೋಧ ಬಗ್ಗೆ ಚರ್ಚೆಯಾಗುತ್ತಿದೆ.
ಬಿಜೆಪಿ ಟೀಕೆ:
ಡಿಕೆಶಿ ಹಣ ಎಸೆಯುತ್ತಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ''ಅಂದು ರಮೇಶ್ ಕುಮಾರ್ ಅವರು ನಾಲ್ಕು ತಲೆಮಾರಿಗಾಗುವಷ್ಟು ನಾವು ಕಾಂಗ್ರೆಸ್‌ನಿಂದ ಪಡೆದಿದ್ದೇವೆ ಎಂದಿದ್ದರು. ಇಂದು ಅದೇ ಕಾಂಗ್ರೆಸ್ಸಿನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಜಾದ್ರೋಹಿ ಯಾತ್ರೆಯಲ್ಲಿ ಹಣವನ್ನು ಎಸೆಯುತ್ತಿರುವುದನ್ನು ನೋಡಿದರೆ ಎಲ್ಲರಿಗೂ ಅರ್ಥ ಆಗುತ್ತದೆ'' ಎಂದು ಬರೆದುಕೊಂಡಿದೆ.
#WATCH | Karnataka Congress Chief DK Shivakumar was seen throwing Rs 500 currency notes on the artists near Bevinahalli in Mandya district during the ‘Praja Dhwani Yatra’ organized by Congress in Srirangapatna. (28.03) pic.twitter.com/aF2Lf0pksi
— ANI (@ANI) March 29, 2023
ಅಂದು ರಮೇಶ್ ಕುಮಾರ್ ಅವರು ನಾಲ್ಕು ತಲೆಮಾರಿಗಾಗುವಷ್ಟು ನಾವು ಕಾಂಗ್ರೆಸ್‌ನಿಂದ ಪಡೆದಿದ್ದೇವೆ ಎಂದಿದ್ದರು. ಇಂದು ಅದೇ ಕಾಂಗ್ರೆಸ್ಸಿನ ಅಧ್ಯಕ್ಷ @DKShivakumar ಅವರು ಪ್ರಜಾದ್ರೋಹಿ ಯಾತ್ರೆಯಲ್ಲಿ ಹಣವನ್ನು ಎಸೆಯುತ್ತಿರುವುದನ್ನು ನೋಡಿದರೆ ಎಲ್ಲರಿಗೂ ಅರ್ಥ ಆಗುತ್ತದೆ.#ಪ್ರಜಾದ್ರೋಹಯಾತ್ರೆ pic.twitter.com/vG6NaeArES
— BJP Karnataka (@BJP4Karnataka) March 28, 2023