ಚುನಾವಣಾ ನೀತಿ ಸಂಹಿತೆ ಜಾರಿ: ಸರಕಾರಿ ಕಾರನ್ನು ಭಾವನಾತ್ಮಕವಾಗಿ ಬೀಳ್ಕೊಟ್ಟ ಸಚಿವ ನಾರಾಯಣ ಗೌಡ
ಮಂಡ್ಯ: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸುತ್ತಿದ್ದಂತೆ, ನೀತಿ ಸಂಹಿತೆಯು ಜಾರಿಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸರ್ಕಾರಿ ಸವಲತ್ತು, ಸರ್ಕಾರಿ ವಾಹನ ಬಳಕೆ ಮಾಡಲು ಹಲವು ನಿರ್ಬಂಧಗಳು ಜಾರಿಗೆ ಬರಲಿವೆ.
ಹೀಗಾಗಿ ತಮಗೆ ನೀಡಿದ್ದ ಸರ್ಕಾರಿ ಕಾರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಮ್ಮ ಕೆ.ಆರ್ ಪೇಟೆ ನಿವಾಸದಲ್ಲಿ ಭಾವನಾತ್ಮಕವಾಗಿ ಬಿಳ್ಕೊಟ್ಟರು.
ಸರಕಾರಕ್ಕೆ ಹಿಂತಿರುಗಿಸುವ ಮುನ್ನ ತಮ್ಮನ್ನು ಹೊತ್ತು ಸಂಚರಿಸಿದ್ದ ಸರಕಾರಿ ಕಾರಿಗೆ ಸಚಿವ ಡಾ.ನಾರಾಯಣಗೌಡ ಅವರು ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ನಿವಾಸದಲ್ಲಿದ್ದ 2 ಕಾರುಗಳು ವಾಪಸ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿದ್ದ 2 ಸರಕಾರಿ ಕಾರುಗಳನ್ನು ಚುನಾವಣಾಧಿಕಾರಿಗಳು ವಾಪಸ್ ಪಡೆದುಕೊಂಡರು.
Next Story