ರಾಷ್ಟ್ರೀಯ ಇ ಫುಟ್‌ಬಾಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದ ಭಟ್ಕಳದ ಇಬ್ರಾಹಿಂ ಗುಲ್ರೆಝ್
ರೊಮೇನಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕರಾವಳಿ ಕುವರ
ರೊಮೇನಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕರಾವಳಿ ಕುವರ
ಭಟ್ಕಳ: ಭಟ್ಕಳ ಮೂಲದ 24 ವರ್ಷದ ಇಬ್ರಾಹಿಂ ಗುಲ್ರೆಝ್ ಅವರು ಎಸ್‌ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರೀಯ ಎಸ್‌ಪೋರ್ಟ್ಸ್ ಚಾಂಪಿಯನ್‌ಶಿಪ್ (ಎನ್‌ಇಎಸ್‌ಸಿ) 2023 ರ ಇ ಫುಟ್‌ಬಾಲ್‌ನಲ್ಲಿ (eFootball) ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ಅವರು ಆಗಸ್ಟ್ 24 ರಿಂದ ಸೆಪ್ಟೆಂಬರ್ 4, 2023 ರವರೆಗೆ ರೊಮೇನಿಯಾದಲ್ಲಿ ನಡೆಯಲಿರುವ 15 ನೇ ವಿಶ್ವ ಎಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ಗಳ (WEC) ಜಾಗತಿಕ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಹಿಂದಿನ ಚಾಂಪಿಯನ್ ಸೇರಿದಂತೆ ದೇಶದಾದ್ಯಂತ 40 ಕ್ಕೂ ಹೆಚ್ಚು ಉನ್ನತ ಆಟಗಾರರು ಇಫುಟ್ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.
ಗುಲ್ರೆಝ್ ಮೊದಲ ಸುತ್ತನ್ನು 3-2 ರಿಂದ ಮತ್ತು ಎರಡನೇ ಸುತ್ತನ್ನು 3-0 ರಿಂದ ಗೆಲ್ಲುವ ಮೂಲಕ ಪ್ರಿತೇಶ್ ಕ್ವಿಂಟನ್ ಡಿಸೋಜಾ ಅವರನ್ನು ಸೋಲಿಸಿದ್ದಾರೆ.
15ನೇ ವಿಶ್ವ ಎಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2023 ಪಂದ್ಯಾಕೂಟವು $500,000 (INR 4.12 ಕೋಟಿ) ಮೊತ್ತದ ಬಹುಮಾನವನ್ನು ಹೊಂದಿದೆ.
Next Story