ಮದನಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ, ಸಿಬ್ಬಂದಿಗೆ ಬೀಳ್ಕೊಡುಗೆ
ಮಂಗಳೂರು: ಉಳ್ಳಾಲ ಅಳೇಕಲದ ಮದನಿ ವಿದ್ಯಾಸಂಸ್ಥೆಯಲ್ಲಿ 38 ವರ್ಷಗಳಿಂದ ಅಧ್ಯಾಪಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಉಮಾವತಿ ಹಾಗೂ ಪಿಯು ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಅಬ್ದುಲ್ ರಝಾಕ್ ಅವರು ಶುಕ್ರವಾರ ವೃತ್ತಿಯಿಂದ ನಿವೃತ್ತರಾದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಹಾಗೂ ಬೋಧಕ/ಬೋಧಕೇತರರ ವತಿಯಿಂದ ಬೀಳ್ಕೊಡಲಾಯಿತು. ಶಾಲಾ ಸಂಚಾಲಕ ಹಾಜಿ ಯು.ಕೆ. ಇಬ್ರಾಹಿಂ ಕಕ್ಕೆತೋಟ, ಬ್ರೈಟ್ ಮದನಿ ಆಂಗ್ಲ ವಿಭಾಗದ ಸಂಚಾಲಕ ಸಯ್ಯದ್ ತಾಹಿರ್ ತಂಙಳ್, ಸದಸ್ಯ ಯು.ಎ. ಇಸ್ಮಾಯಿಲ್ ಶುಭ ಹಾರೈಸಿದರು.
ಕಾರ್ಯದರ್ಶಿ ಅಬ್ದುಲ್ ಪತಾಕ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಿಯಾಝ್ ಮಂಗಳೂರು ವಂದಿಸಿದರು. ಪ್ರಾಂಶುಪಾಲ ಇಸ್ಮಾಯಿಲ್ ಟಿ. ಕಾರ್ಯಕ್ರಮ ನಿರೂಪಿಸಿದರು.
Next Story