ತಾಂತ್ರಿ‘ಕತೆ’
ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ‘ಎಡಿಟ್’ಗೆ ಅವಕಾಶ
ತನ್ನ ಬಳಕೆದಾರರಿಗೆ ವಾಟ್ಸ್ ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಕಳಿಸಿದ ಮೆಸೇಜ್ ಎಡಿಟ್ ಮಾಡುವ ಕುರಿತ ಫೀಚರ್ ಲಭ್ಯವಾಗಲಿದೆ.
ವಾಟ್ಸ್ಆ್ಯಪ್ ಸಂದೇಶಗಳನ್ನು ಎಡಿಟ್ ಮಾಡುವ ಸಾಮರ್ಥ್ಯದ ಮೇಲೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದು ಅಪ್ಲಿಕೇಶನ್ನ ಅಪ್ಡೇಟ್ ಆವೃತ್ತಿಯಲ್ಲಿ ಲಭ್ಯವಿರಲಿದೆ ಎಂದು ವರದಿಯಾಗಿದೆ.
ಇದು ಬಳಕೆದಾರರು ಹೆಚ್ಚು ನಿರೀಕ್ಷಿಸುತ್ತಿರುವ ಫೀಚರ್ ಅಗಿದೆ. ಇದು ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ನಲ್ಲಿ ಖಂಡಿತವಾಗಿಯೂ ಅಗತ್ಯವಾದ ಫೀಚರ್ ಆಗಿದೆ.
ಈ ಫೀಚರ್ ಮೂಲಕ ಬಳಕೆದಾರರು ತಾವು ಕಳುಹಿಸುವ ಮತ್ತು ಸ್ವೀಕರಿಸುವ ಸಂದೇಶಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲಿದ್ದಾರೆ.
-------------------------------------------------------
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವಿವೋ ಫ್ಲಿಪ್ ಫೋಲ್ಡೆಬಲ್ ಫೋನ್
ಹಲವಾರು ಸ್ಮಾರ್ಟ್ಫೋನ್ ತಯಾರಕರು ಈಗಾಗಲೇ ಫೋಲ್ಡೆಬಲ್ ಮೊಬೈಲ್ಗಳನ್ನು ಲಾಂಚ್ ಮಾಡಲು ಯೋಚಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ಯಾಮ್ಸಂಗ್ ಈ ಜಾಗದಲ್ಲಿ ಪ್ರಾಬಲ್ಯ ಹೊಂದಿದೆ. ಒಪ್ಪೊ ತನ್ನ ಮೊತ್ತಮೊದಲ ಕ್ಲಾಮ್ಶೆಲ್ ಫೋಲ್ಡೆಬಲ್ ಫೋನ್ ಫೈಂಡ್ ಎನ್2 ಫ್ಲಿಪ್ ಅನ್ನು ಮಾರ್ಚ್ ಮಧ್ಯದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತು. ಇತ್ತೀಚಿನ ಫ್ಲಿಪ್ ಫೋಲ್ಡೆಬಲ್ ಫೋನ್ ಸ್ಯಾಮ್ಸಂಗ್ನ ಗ್ಯಾಲಕ್ಸಿ ಝಡ್ ಫ್ಲಿಪ್ ಸರಣಿಗೆ ಹತ್ತಿರವಾಗಿದೆ. ಈಗ, ಮತ್ತೊಂದು ಚೀನೀ ಸ್ಮಾರ್ಟ್ಫೋನ್ ತಯಾರಕ, ವಿವೋ ಫೋಲ್ಡೆಬಲ್ ಸ್ಮಾರ್ಟ್ಫೋನ್ ಪೋರ್ಟ್ಫೋಲಿಯೊ ವಿಸ್ತೃತ ಆವೃತ್ತಿಯನ್ನು ತರಲು ಯೋಚಿಸುತ್ತಿದೆ ಎಂದು ವರದಿಯಾಗಿದೆ.
ವಿವೋ ಎಪ್ರಿಲ್ 2021ರಲ್ಲಿ ವಿವೋ ಎಕ್ಸ್ ಫೋಲ್ಡ್ ಬಿಡುಗಡೆ ಮಾಡಿತು. ಸೆಪ್ಟಂಬರ್ 2022ರಲ್ಲಿ, ಇದರ ಅಪ್ಗ್ರೇಡ್ ಆವೃತ್ತಿ ವಿವೋ ಎಕ್ಸ್ ಫೋಲ್ಡ್+ ಬಂತು. ಕಂಪೆನಿಯು ಈಗಾಗಲೇ ವಿವೋ ಎಕ್ಸ್ ಫೋಲ್ಡ್ 2 ತರಲಿರುವ ಸುಳಿವುಗಳು ಸಿಕ್ಕಿವೆ. ಇದು ಸ್ನ್ಯಾಪ್ಡ್ರಾಗನ್ 8 ಜೆನ್ 2 ಚಿಪ್ಸೆಟ್ನಿಂದ ಚಾಲಿತವಾಗಲಿದೆ ಎನ್ನಲಾಗುತ್ತಿದೆ ಮತ್ತು 120ತಿ ಸಾಮರ್ಥ್ಯದ ಚಾರ್ಜಿಂಗ್ ವ್ಯವಸ್ಥೆ ಇರಲಿದೆ.
-------------------------------------------------------
ವಾಟ್ಸ್ಆ್ಯಪ್ನ ಕಣ್ಮರೆಯಾಗುವ ಸಂದೇಶ ಹೊಸ ಫೀಚರ್
ಮೆಟಾ ಮಾಲಕತ್ವದ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಬಹು ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ. 2020ರಲ್ಲಿ, ವಾಟ್ಸ್ಆ್ಯಪ್ಕಣ್ಮರೆಯಾಗುತ್ತಿರುವ ಸಂದೇಶ ಫೀಚರ್ ಪರಿಚಯಿಸಿತು, ಇದು ಬಳಕೆದಾರರು ತಮ್ಮ ಸಂದೇಶಗಳನ್ನು ಪ್ಲಾಟ್ಫಾರ್ಮ್ನಲ್ಲಿ ಶಾಶ್ವತವಾಗಿ ಉಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈಗ, ಕಂಪೆನಿಯು ಈ ಫೀಚರ್ ಅನ್ನು ಹೊಸ ಅವಧಿಯ ಆಯ್ಕೆಗಳೊಂದಿಗೆ ನವೀಕರಿಸಲು ಯೋಜಿಸುತ್ತಿದೆ. ಈ ನವೀಕರಣವು ಬಳಕೆದಾರರು ತಮ್ಮ ಸಂದೇಶಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಹಾಯ ಮಾಡುತ್ತದೆ. ವಾಟ್ಸ್ಆ್ಯಪ್ ಡೆಸ್ಕ್ಟಾಪ್ಗಾಗಿ ಇತ್ತೀಚಿನ ಬೀಟಾ ಅಪ್ಡೇಟ್ನಲ್ಲಿ ಈ ಹೊಸ ಫೀಚರ್ ಅಭಿವೃದ್ಧಿಯಲ್ಲಿ ನಿರತವಾಗಿದೆ.
ಈ ಫೀಚರ್ ನಿರ್ದಿಷ್ಟ ಅವಧಿಯ ನಂತರ ಗುರುತು ಮಾಡಿದ ಸಂದೇಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ. ಈ ಫೀಚರ್ ಸಂದೇಶಗಳನ್ನು ಸರ್ವರ್ ಅಥವಾ ಸ್ವೀಕರಿಸುವವರ ಸಾಧನದಲ್ಲಿ ಶಾಶ್ವತವಾಗಿ ಸಂಗ್ರಹಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಸಂಭಾಷಣೆಗಳ ಗೌಪ್ಯತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ವಾಟ್ಸ್ಆ್ಯಪ್ ಕಣ್ಮರೆಯಾಗುವ ಸಂದೇಶಗಳಿಗೆ ಕೇವಲ ಮೂರು ಅವಧಿಗಳನ್ನು ಬೆಂಬಲಿಸುತ್ತದೆ. 24 ಗಂಟೆಗಳು, 7 ದಿನಗಳು ಮತ್ತು 90 ದಿನಗಳು. ಈ ಹೊಸ ಆಯ್ಕೆಗಳಲ್ಲಿ ಇನ್ನಷ್ಟು ಆಯ್ಕೆಗಳು ಮೆನು ಅಡಿಯಲ್ಲಿ ಲಭ್ಯವಿರುತ್ತವೆ.
ಈ ಹೊಸ ಸಾಮರ್ಥ್ಯವು ಬಳಕೆದಾರರಿಗೆ ಕಣ್ಮರೆಯಾಗುವ ಸಂದೇಶಗಳಿಗೆ 15 ವಿಭಿನ್ನ ಅವಧಿಗಳನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಅದರಂತೆ 1 ವರ್ಷ, 180 ದಿನಗಳು, 60 ದಿನಗಳು, 30 ದಿನಗಳು, 21 ದಿನಗಳು, 14 ದಿನಗಳು, 6 ದಿನಗಳು, 5 ದಿನಗಳು, 4 ದಿನಗಳು, 3 ದಿನಗಳು, 2 ದಿನಗಳು, 12 ಗಂಟೆಗಳು, 6 ಗಂಟೆಗಳು, 3 ಗಂಟೆಗಳು ಮತ್ತು 1 ಗಂಟೆ ಹೀಗೆ ಅವಧಿಯನ್ನು ಆಯ್ಕೆ ಮಾಡಬಹುದು.