ಸ್ಯಾಂಕಿ ಮೇಲ್ಸೇತುವೆ ವಿರೋಧಿ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದವರ ಮೇಲೆ ನಗರದ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಯಾಂಕಿ ರಸ್ತೆ ಮೇಲ್ಸೇತುವೆ, ರಸ್ತೆ ವಿಸ್ತರಣೆ ಯೋಜನೆ ವಿರೋಧಿಸಿ ಫೆ.19ರಂದು ಸುಮಾರು 70 ಜನ ಸ್ಥಳೀಯ ನಿವಾಸಿಗಳು, ಮಕ್ಕಳು ಸೇರಿ ಸ್ಯಾಂಕಿ ಕೆರೆ ಪರಿಸರ ಉಳಿಸುವಂತೆ ಧರಣಿ ನಡೆಸಿದ್ದರು. ಅನುಮತಿ ಪಡೆಯದೇ ಧರಣಿ, ರಸ್ತೆ ಸಂಚಾರಕ್ಕೆ ಅಡಚಣೆ ಆರೋಪ ಹಿನ್ನೆಲೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಹೋರಾಟಗಾರರ ಆಕ್ರೋಶ: 'ಪುಟ್ ಪಾತ್ ನಲ್ಲಿ ನಡೆದು ಪ್ರತಿಭಟನೆ ಮಾಡಿದ್ದೇವೆ. ಆರೆ ಪೊಲೀಸರು ಮಾತ್ರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದೀರಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದೀರಿ. ಪೂರ್ವಾನುಮತಿ ಪಡೆಯದೇ ಹೋರಾಟ ಮಾಡಿದ್ದೀರಿ ಅಂತಾ ಕೇಸ್ ದಾಖಲಿಸಿಕೊಂಡಿದ್ದಾರೆ' ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story