ರಾಜಕೀಯ ಪ್ರವೇಶದ ವದಂತಿ: ನಟ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ತನ್ನ ರಾಜಕೀಯ ಪ್ರವೇಶದ ಕುರಿತಾಗಿ ಹಬ್ಬಿರುವ ಸುದ್ದಿಯ ಕುರಿತು ನಟ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ರಿಷಬ್ ಶೆಟ್ಟಿ ರಾಜಕೀಯ ಪ್ರವೇಶದ ಕುರಿತಾಗಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟ, ''ಸುಮ್ನನೆ ಇರಿ ಮರ್ರೆ... ಸುಳ್ಳು ಸುದ್ದಿ, ಎಪ್ರಿಲ್ 1 ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ರಿಷಬ್ ಶೆಟ್ಟಿಯ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ವ್ಯಕ್ತಿ, ''ರಾಜಕೀಯಕ್ಕೆ ಬನ್ನಿ ಶೆಟ್ರೇ... ನಮ್ಮ ಸಂಪೂರ್ಣ ಬೆಂಬಲ ಇದೆ'' ಎಂದು ಹೇಳಿದ್ದಾರೆ. ಇದಕ್ಕೂ ಪ್ರತಿಕ್ರಿಯೆ ನೀಡಿರುವ ರಿಷಬ್, ''ಬೇಡ ದೇವ್ರು, ನನ್ನ ಸಿನೆಮಾಗೆ ನಿಮ್ಮ ಬೆಂಬಲ ಇದ್ದರೆ ಸಾಕು'' ಎಂದು ಉತ್ತರಿಸಿದ್ದಾರೆ.
''ಅಣ್ಣ ನೀವು ಉತ್ತಮ ಸಿನೆಮಾಗಳನ್ನ ಮಾಡಿಕೊಂಡು ಎಲ್ಲರ ಒಟ್ಟಿಗೆ ಚೆನ್ನಾಗಿ ಇರಿ ಸಾಕು'' ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಸುಮ್ನನೆ ಇರಿ ಮರ್ರೆ ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ
— Rishab Shetty (@shetty_rishab) April 1, 2023
ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು
— Rishab Shetty (@shetty_rishab) April 1, 2023