ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಸಂಸ್ಥೆಗಳ ಪದವಿ ಪ್ರದಾನ
ಮಂಗಳೂರು: ಭಾರತದಲ್ಲಿ ನರ್ಸಿಂಗ್ ಶಿಕ್ಷಣದಲ್ಲಿ ಏಕರೂಪದ ಪಠ್ಯಕ್ರಮವಿದ್ದರೂ, ಗುಣಮಟ್ಟ ಒಂದೇ ರೀತಿಯಾಗಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳ ಪೈಕಿ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥ್ಥೆ ಕೂಡಾ ಒಂದಾಗಿದೆ ಎಂದು ಟ್ರೈನಿಡ್ ನರ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಪ್ರೊ. (ಡಾ) ರಾಯ್ ಕೆ ಜಾರ್ಜ್ ಹೇಳಿದ್ದಾರೆ.
ಫಾದರ್ ಮುಲ್ಲರ್ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜು ಇವುಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನರ್ಸಿಂಗ್ ತರಬೇತಿ ಪಡೆದವರಿಗೆ ಎಲ್ಲಡೆ ಬೇಡಿಕೆ ಇದೆ. ಭಾರತದಲ್ಲಿ ಬೇಡಿಕೆ ಇರುವಷ್ಟು ನರ್ಸ್‌ಗಳು ತಯಾರಾಗುತ್ತಿಲ್ಲ ಎಂದರು.
ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಪ್ರೊ. (ಶ್ರೀ) ಪ್ರಸನ್ನ ಕುಮಾರ್ ಒ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಜಾಗತಿಕವಾಗಿ ಎಂದು ಹೆಚ್ಚು ಬೇಡಿಕೆ ಇರುವ ನರ್ಸಿಂಗ್ ಶಿಕ್ಷಣಗಳು ಇಂದಿನ ದಿನಗಳಲ್ಲಿ ಶಿಕ್ಷಣ ಉದ್ಯಮಿಗಳ ವಶವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಉತ್ತಮ ನರ್ಸ್‌ಗಳು ರೂಪುಗೊಳ್ಳುತ್ತ್ತಿದ್ದಾರೆ. ಫಾದರ್ ಮುಲ್ಲರ್ ಶಿಕ್ಷಣ ಸಂಸೆಗಳ ಉಪಾಧ್ಯಕ್ಷ ಮ್ಯಾಕ್ಸಿಮ್ ಎಲ್ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪದವೀಧರರಾದ ಸ್ನೇಹಾ ಮಯೋಲಾ ನೊರೊನ್ಹಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 169 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಪ್ರಾಂಶುಪಾಲ ಜೆಸಿಂತಾ ಡಿ ಸೋಜಾ ವರದಿ ವಾಚಿಸಿದರು. ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಸಿಯೆಸ್ ಕುವೆಲ್ಲೊ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ದೇವಿನಾ ಇ ರೋಡ್ರಿಗಸ್ ವಂದಿಸಿದರು.
ಅಸೋಸೆಯೆಟ್ ಪ್ರೋಫೆರ್‌ಗಳಾದ ಸಾಂದ್ರಾ ಜ್ಯೋತಿ ಸಲ್ದಾನ ಮತ್ತು ಅಶ್ವಿನ್ ಬ್ರೊಮೆಯೊ ಕಾರ್ಯಕ್ರಮ ನಿರೂಪಿಸಿದರು.