ಸಾತನೂರು ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಬಿಜೆಪಿ ನಾಯಕರು, ಸಚಿವರ ಫೋಟೋ ವೈರಲ್
ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸುವಂತೆ ಕಾಂಗ್ರೆಸ್ ಆಗ್ರಹ
ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ತಲೆ ಮರೆಸಿಕೊಂಡಿದ್ದು, ಸದ್ಯ ಆತನ ಜೊತೆಗಿದ್ದ ಬಿಜೆಪಿ ನಾಯಕರು ಮತ್ತು ಕೆಲವು ಸಚಿವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೊಂದಿಗೆ ಪುನೀತ್ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ .
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ಕಾಂಗ್ರೆಸ್, 'ಜಾನುವಾರು ಸಾಗಣೆ ವಾಹನದ ಚಾಲಕನನ್ನು ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ ಹೊಂದಿದ್ದಾನೆ. ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಎಬ್ಬಿಸಲು ಈ ಕೊಲೆಗೆ ಬಿಜೆಪಿ ನಾಯಕರೇ ಸುಪಾರಿ ನೀಡಿದ್ದರೇ? ಇದು ಬಿಜೆಪಿ ಪ್ರಾಯೋಜಿತ ಕೊಲೆಯೇ? ಪೋಲಿಸರು ಆತನೊಂದಿಗೆ ನಿಕಟ ಸಂಬಂಧವಿರುವ ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸಬೇಕು' ಎಂದು ಒತ್ತಾಯಿಸಿದೆ.
ಜಾನುವಾರು ಸಾಗಣೆ ವಾಹನದ ಚಾಲಕನನ್ನು ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ ಹೊಂದಿದ್ದಾನೆ.
— Karnataka Congress (@INCKarnataka) April 2, 2023
ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಎಬ್ಬಿಸಲು ಈ ಕೊಲೆಗೆ @BJP4Karnataka ನಾಯಕರೇ ಸುಪಾರಿ ನೀಡಿದ್ದರೇ?
ಇದು ಬಿಜೆಪಿ ಪ್ರಾಯೋಜಿತ ಕೊಲೆಯೇ?
ಪೋಲಿಸರು ಆತನೊಂದಿಗೆ ನಿಕಟ ಸಂಬಂಧವಿರುವ ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸಬೇಕು. pic.twitter.com/kXo4j6MbMs
Puneeth Kerehalli is closely associated to Founder of 'Yuva Brigade' Chakravarty Sulibele and Chief of Sri Ram Sene, Pramod Muthalik. pic.twitter.com/piN2U54qkZ
— Mohammed Zubair (@zoo_bear) April 2, 2023