‘ಶಿಕ್ಷಕರು ಪ್ರತಿಭಾವಿಕಸನಕ್ಕೆ ಇಂಬು ನೀಡಬೇಕು’
ಉಡುಪಿ, ಎ.9: ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ- ಶಿಕ್ಷಕರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕರು ಭಾವಗೀತೆ, ತತ್ವಪದ, ಯಕ್ಷಗಾನ ಕುಣಿತ ಮತ್ತು ‘ಮಮತೆಯ ಬಂಧನ’ ಎಂಬ ಕಿರುರೂಪಕವನ್ನು ಪ್ರಸ್ತುತ ಪಡಿಸಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಭಾಸಂಪನ್ನನೇ. ಪ್ರತಿಭೆ ಇಲ್ಲದವರು ಯಾರೂ ಇಲ್ಲ. ಪ್ರತಿಭೆಯ ಪ್ರಮಾಣ, ತೀವ್ರತೆ ಹಾಗೂ ಗುಣ ಮೌಲ್ಯದಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ.ನಭವಿಷ್ಯದ ಶಿಕ್ಷಕರು ತಮ್ಮಲ್ಲಿರುವ ಪ್ರತಿಭಾ ವಿಶೇಷವನ್ನು ಗುರುತಿಸಿ ಅದನ್ನು ಮೊನಚುಗೊಳಿಸಬೇಕಲ್ಲದೆ ವಿದ್ಯಾರ್ಥಿಗಳ ಪ್ರತಿಭಾವಿಕಸನಕ್ಕೂ ನಿರಂತರ ಇಂಬು ನೀಡಬೇಕು ಎಂದು ಹೇಳಿದರು.
ಶ್ರೇಯಾ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರೆ, ಸಾಗರ್ ಸ್ವಾಗತ ಕೋರಿದರು. ಎ.ಮೆಹ್ಫೂಸ ವಂದಿಸಿದರು.
Next Story