ಅಹಮದ್ ಹಾಜಿ ಮುಸ್ಲಿಯಾರ್
ರಾಮಕುಂಜ: ಕೆಮ್ಮಾರ ಮಸೀದಿ ಬಳಿ ನಿವಾಸಿ, ಅಹಮದ್ ಹಾಜಿ ಮುಸ್ಲಿಯಾರ್ ಆತೂರು (80) ಕೆಲ ದಿನಗಳ ಅನಾರೋಗ್ಯದಿಂದ ಎ. 10ರಂದು ತನ್ನ ಮನೆಯಲ್ಲಿ ನಿಧನರಾದರು. .
ಅಹಮದ್ ಹಾಜಿ ಮುಸ್ಲಿಯಾರ್ ಅವರು ಕೆಮ್ಮಾರ, ಆತೂರು, ಕೊಕ್ಕಡ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಿ ಬಳಿಕ ಮುಂಬೈಯ ಡೋಂಗ್ರಿಯ ಮಸೀದಿಯಲ್ಲಿ ಸುಮಾರು 25 ವರ್ಷಗಳ ಕಾಲ ಖತೀಬ್ ಆಗಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು.
ಖ್ಯಾತ ಧಾರ್ಮಿಕ ಪಂಡಿತ ದಿವಂಗತ ಡಾ. ಶಾಹ್ ಮುಸ್ಲಿಯಾರ್ ರವರ ಸಹೋದರರಾಗಿರುವ ಅಹಮದ್ ಹಾಜಿ ಮುಸ್ಲಿಯಾರ್ರವರು ಸರಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿತ್ವದವರು. ಅವರು ಮೋನು ಮುಸ್ಲಿಯಾರ್ ಎಂದೇ ಚಿರಪರಿಚಿತರಾಗಿದ್ದರು.
ಅಹಮದ್ ಹಾಜಿ ಮುಸ್ಲಿಯಾರ್ ರವರು ಪತ್ನಿ, ನಾಲ್ವರು ಪುತ್ರಿಯರು, ಐವರು ಪುತ್ರರನ್ನು ಅಗಲಿದ್ದಾರೆ.
Next Story